Wednesday, January 28, 2026
16.4 C
Bengaluru
Google search engine
LIVE
ಮನೆಜಿಲ್ಲೆಸಿದ್ದಗಂಗಾ ಮಠದಲ್ಲಿ ಗೃಹ ಸಚಿವ ಜಿ. ಪರಮೇಶ್ವರ್​ ಹೇಳಿದ್ದೇನು ?

ಸಿದ್ದಗಂಗಾ ಮಠದಲ್ಲಿ ಗೃಹ ಸಚಿವ ಜಿ. ಪರಮೇಶ್ವರ್​ ಹೇಳಿದ್ದೇನು ?

ತುಮಕೂರು : ಸಿದ್ದಗಂಗಾ ಮಠದಲ್ಲಿ ಗುರುಭವನದ ಕುರಿತು ಗೃಹ ಸಚಿವ ಡಾ. ಜಿ ಪರಮೇಶ್ವರ್​​ ಮಾತನಾಡಿದ್ದು, ಸೋಮಣ್ಣ ಅವರ ಕುಟುಂಬ ಸಿದ್ದಗಂಗಾ ಮಠದಲ್ಲಿ ಗುರುಭವನ ಕಟ್ಟಿಸಿದ್ದಾರೆ. ಸ್ವಾಮಿಜಿಗಳ  ಪೂಜೆ ಮಾಡೋಕೆ ಅದು ಉಪಯೋಗ ಆಗ್ತಾ ಇದೆ.  ಅದರ ಲೋಕಾರ್ಪಣ ಕಾರ್ಯಕ್ರಮಕ್ಕೆ ನನ್ನನ್ನು ಹಾಗೂ ರಾಜಣ್ಣ ಅವರನ್ನು ಕರೆದಿದ್ದರು. ಅಧಿವೇಶನ ಇದ್ದರೂ ಕೂಡ ಇದು ಮುಖ್ಯವಾದ ಕಾರ್ಯಕ್ರಮ ಅಂತಾ ನಾವು ಅನುಮತಿ ತಗೊಂಡು ಈ ಕಾರ್ಯಕ್ರಮ ಭಾಗಿಯಾಗಿದ್ದೇವೆ ಎಂದರು.

ಸೋಮಣ್ಣ ಅವರಿಗೆ ನಾನು ಹೆದರಬೇಡಿ ಎಂದು ಸಹಜವಾಗಿ ಹೇಳಿದ್ದೇನೆ. ಯಾವ ರೀತಿ ಅಭಯ ಕೊಟ್ಟಿಲ್ಲ ಅದಕ್ಕೆ ಬೇರೆ ರಾಜಕೀಯ ಅರ್ಥ ಕಲ್ಪಿಸುವುದು ಅಗತ್ಯ ಇಲ್ಲ.  ಅವರು ಪ್ರೀತಿಯಿಂದ ನನಗೆ ಕಾರ್ಯಕ್ರಮಕ್ಕೆ ಕರೆದಿದ್ದಾರೆ. ಕಾರ್ಯಕ್ರಮದಲ್ಲಿ  ರಾಜಕಾರಣದ ಯಾವುದೇ ಮಾತುಗಳನ್ನ ನಾನು ಆಡಿಲ್ಲ. ಇನ್ನು ಕೂಡ ಅವರಿಗೆ ಅವಕಾಶಗಳು ಬರಬಹುದೇನೋ ಅಂತ ಹೇಳಿದ್ದೇನೆ. ರಾಜಣ್ಣ ನಾನು ಇಬ್ಬರು ಸೇರಿ ಸೆಂಟ್ರಲ್ ಕಾಲೇಜಿನಲ್ಲಿ ಶಿವಕುಮಾರ ಶ್ರೀಗಳ ಅಧ್ಯಯನ ಪೀಠ ಸ್ಥಾಪಿಸುತ್ತೇವೆ ಎಂದು ಹೇಳಿದರು.

ಭ್ರೂಣಹತ್ಯೆ ಪ್ರಕರಣ ವಿಚಾರ ಕುರಿತು ಮಾತನಾಡಿದ ಅವರು, ಈ ಕುರಿತು ತನಿಖೆ ನಡೀತಿದೆ ಎಲ್ಲರೂ ಎಲ್ಲ ಜಿಲ್ಲೆಯಲ್ಲೂ ಕೂಡ ತನಿಖೆ ನಡೆಯುತ್ತಿದೆ ಎಂದರು. ಮಾಡಾಳ್​ ವಿರೂಪಾಕ್ಷ ಕೇಸ್​ ವಿಚಾರವಾಗಿ ಮಾತನಾಡಿದ್ದು, ಅವರ ಪ್ರಕರಣಗಳಲ್ಲಿ ಪ್ರಾಸಿಕ್ಯೂಸನ್​ಗೆ ಅನುಮತಿ ಕೇಳಿಲ್ಲ. ಅನುಮತಿ ಕೇಳಿದ್ರೆ ನಾವು ಕೊಡುತಿದ್ವಿ, ಆ ವಿಚಾರ ನನ್ನ ಗಮನಕ್ಕೆ ಬಂದಿಲ್ಲ ಎತ್ತಿನಹೊಳೆ ಯೋಜನೆ 2023ಕ್ಕೆ ಮುಗಿಯಬೇಕು. ನಾವು ಕೂಡ ಅತಿಯಾಗಿ ಒತ್ತಡ ಹಾಕ್ತಾ ಇದ್ದೇವೆ,  ಕಳಪೆ ಕಾಮಗಾರಿ ಕುರಿತು ಮುಂದೆ ತನಿಖೆ ಮಾಡುತ್ತೇವೆ ಎಂದರು.

ಪೊಲೀಸರು ಮತ್ತು ವಕೀಲರ ಗಲಾಟೆ ವಿಚಾರವಾಗಿ ಪರಮೇಶ್ವರ್​ ಮಾತನಾಡಿದ್ದು, ಈಗಾಗಲೇ ನನಗೆ ಹೈಕೋರ್ಟ್​ನಿಂದ ಸ್ಪಷ್ಟವಾದ ನಿರ್ದೇಶನ ಕೊಟ್ಟಿದ್ದಾರೆ. ಪೊಲೀಸ್​ನವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಆದೇಶದ ಹಾರ್ಡ್ ಕಾಪಿ ಸಂಪೂರ್ಣ ಓದಿ ಆನಂತರ ಪ್ರತಿಕ್ರಿಯೆ ಮಾಡುತ್ತೇನೆ ಎಂದರು. ಪೊಲೀಸ್​​ನವರು ಈ ರೀತಿ ನಡ್ಕೊಳ್ಳೋವುದನ್ನು ಯಾರೂ ಸಹಿಸಲಿಲ್ಲ. ಪೊಲೀಸರಿಗೆ ಕಷ್ಟ, ತೊಂದರೆ ಆಗಿದ್ದರೆ ಅವರು ನಮ್ಮ ಗಮನಕ್ಕೆ ತರಬಹುದು. ಅದಕ್ಕೆ ಒಂದು ನೀತಿ ನಿಯಮ ಇದೆ ಅಧಿಕಾರಿಗಳು ಇದ್ದಾರೆ. ನಾವು ಆ ಸಮಸ್ಯೆ ಪರಿಹರಿಸುತ್ತೇವೆ ಬೀದಿಗೆ ಇಳಿದು ಪ್ರತಿಭಟಿಸೋದನ್ನ ನಾವು ಸಹಿಸುವುದಿಲ್ಲ ಎಂದು ತುಮಕೂರಿನಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್​ ತಿಳಿಸಿದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments