ದೇಶ/ವಿದೇಶ

ಸಿಂಧೂರ ಅಳಿಸಿದವರನ್ನು ಮಣ್ಣಲ್ಲಿ ಹೂತಿದ್ದೇವೆ – ಪ್ರಧಾನಿ ನರೆಂದ್ರ ಮೋದಿ

ರಾಜಸ್ಥಾನ್​ : ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗೆ ಭಾರತವು ಸೇಡು ತೀರಿಸಿಕೊಂಡಿದೆ. ಸಿಂಧೂರ ಅಳಿಸಲು ಹೊರಟವರನ್ನು ಮಣ್ಣಿನಲ್ಲಿ ಹೂತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ರಾಜಸ್ಥಾನದ ಬಿಕನೇರ್ ಜಿಲ್ಲೆಯಲ್ಲಿ ಹೇಳಿದ್ದಾರೆ

ದೇಶದ ಪ್ರತಿಯೊಬ್ಬ ನಾಗರೀಕನು ಭಯೋತ್ಪಾದನೆ ನಿರ್ನಾಮಕ್ಕಾಗಿ ಸಂಕಲ್ಪ ಮಾಡಬೇಕು ಎಂದು ರಾಜಸ್ಥಾನದ ಬಿಕನೇರ್​ ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಭಯೋತ್ಪಾದಕರು ಪಹಲ್ಗಾಮ್​​ನಲ್ಲಿ ಪ್ರವಾಸಿಗರ ಮೇಲೆ ಗುಂಡು ಹಾರಿಸಿದ್ದಾರೆ.ಆದರೆ, ಅದರ ನೋವು ದೇಶದ 140 ಕೋಟಿ ಭಾರತೀಯರು ಅನುಭವಿಸಿದ್ದಾರೆ.ಭಯೋತ್ಪಾದನೆ ನಿರ್ನಾಮಕ್ಕಾಗಿ ಎಲ್ಲರೂ ಒಗ್ಗಟ್ಟಿನ ಪ್ರತಿಜ್ಞೆ ಮಾಡಿ ಎಂದು ಕರೆ ಕೊಟ್ಟಿದ್ದಾರೆ.ಅವರು ಕಲ್ಪನೆ ಮಾಡದಷ್ಟು ಉಗ್ರರಿಗೆ ಶಿಕ್ಷೆಯನ್ನು ನೀಡಬೇಕು.ಭಾರತೀಯ 3 ಸೇನೆಗಳಿಗೂ ನಾವು ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವು.ಚಕ್ರವ್ಯೂಹದಲ್ಲಿ ಸಿಲುಕಿಸಿ ಪಾಕ್ ಮಂಡಿಯೂರುವಂತೆ ಮಾಡಿದ್ದೇವೆ ಎಂದು ಪ್ರಧಾನಿ ಮೋದಿ ಘರ್ಜನೆ ಮಾಡಿದ್ದಾರೆ.

Comments (0)

Your email address will not be published. Required fields are marked *

Back to top button