ರಾಜಕೀಯ

ಸಂಸತ್ತಿನಲ್ಲಿ ನಡೆದ ಘಟನೆ ಆತಂಕಕಾರಿಯಾಗಿದೆ : ನರೇಂದ್ರ ಮೋದಿ

ಸಂಸತ್ತಿನ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದು, ಸಂಸತ್ತಿನಲ್ಲಿ ನಡೆದ ಘಟನೆ ಆತಂಕಕಾರಿಯಾಗಿದೆ ಎಂದು ಹೇಳಿದ್ದಾರೆ. ಇದು ಗಂಭೀರವಾದ ವಿಚಾರ, ಈ ಬಗ್ಗೆ ಆಳವಾದ ತನಿಖೆ ನಡೆಯಬೇಕು, ಇದು ರಾಷ್ಟ್ರೀಯ ಭದ್ರತಾ ವಿಷಯವಾಗಿರುವುದರಿಂದ ರಾಜಕೀಯ ಪಕ್ಷಗಳು ಈ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂದಿದ್ದಾರೆ.

ಸಂಸತ್ತಿನಲ್ಲಿ ನಡೆದ ಘಟನೆಯ ಗಂಭೀರತೆಯನ್ನು ಕಡೆಗಣಿಸಬಾರದು, ಹಾಗಾಗಿ ಲೋಕಸಭಾ ಸ್ಪೀಕರ್ ಕೆಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಈ ಘಟನೆಯ ಹಿಂದಿನ ಉದ್ದೇಶವೇನು ಎಂದು ತಿಳಿಯಲು ವಿಷಯದ ಆಳಕ್ಕೆ ಹೋಗುವುದು ಮುಖ್ಯ, ಒಟ್ಟಾಗಿ ಪರಿಹಾರ ಸಿಗಬೇಕು.

ಡಿಸೆಂಬರ್ 13 ರಂದು ಸಾಗರ್ ಹಾಗೂ ಮನೋರಂಜನ್ ಎನ್ನುವ ಇಬ್ಬರು ಸದನದೊಳಗೆ ನುಗ್ಗಿ ಹೊಗೆ ಕ್ಯಾನ್ ಎಸೆದಿದ್ದರು, ಲೋಕಸಭೆ ಪೂರ್ತಿ ಹೊಗೆ ತುಂಬಿಕೊಂಡಿದ್ದ ಕಾರಣ ಎಲ್ಲರೂ ಭಯಭೀತರಾಗಿದ್ದರು. ಕೆಲ ಸಮಯದ ಬಳಿಕ ಅವರಿಬ್ಬರನ್ನು ಬಂಧಿಸಲಾಯಿತು, ಸಂಸತ್​ ಹೊರಗೆ ಘೋಷಣೆ ಕೂಗುತ್ತಿದ್ದ ಇನ್ನೂ ಇಬ್ಬರನ್ನು ಕೂಡ ವಶಕ್ಕೆ ಪಡೆಯಲಾಗಿದೆ. ಇಲ್ಲಿಯವರೆಗೆ ಈ ಪ್ರಕರಣದಲ್ಲಿ 6 ಮಂದಿಯನ್ನು ಬಂಧಿಸಲಾಗಿದೆ.

Comments (0)

Your email address will not be published. Required fields are marked *

Back to top button