ಶಿಕ್ಷಕರು ಎಂದರೆ ಮಾರದರ್ಶಕರು ,ಯೇನು ಅರಿಯದ ಮೆದುಳಿಗೆ ಜ್ಞಾನ ದಾಸೋಹ ಮಾಡೋ ಉನ್ನತರು. ವಿದ್ಯಾವಂತರು ಮತ್ತು ಬುದ್ದಿವಂತರು ಬೆಂಗಳೂರಿನ ಶಿಕ್ಷಕರೆಲ್ಲರೂ ಸೇರಿ ಪುಟ್ಟಣ್ಣ ಅವರನ್ನು ಗೆಲ್ಲಿಸಿದ್ದೀರಿ. ಇದು ಪುಟ್ಟಣ್ಣನ ಗೆಲುವು ಮಾತ್ರವಲ್ಲ. ಇದು ನಿಮ್ಮ ಗೆಲುವು.

 

ಎರಡು ಪಕ್ಷಗಳ ಅಪವಿತ್ರ ಮೈತ್ರಿಯನ್ನನಿರಾಕರಿಸಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಶಕ್ತಿ ಕೊಟ್ಟಿದ್ದೀರಿ. ಇದಕ್ಕಾಗಿ ನಿಮಗೆ ನಾನೆಂದು ಆಭಾರಿ ನಾವಿಲ್ಲಿಗೆ ಬಂದಿದ್ದೇವೆ. ನಿಮ್ಮ ಬೇಡಿಕೆಗಳನ್ನು ಪುಟ್ಟಣ್ಣ ಅವರು ನಮಗೆ ನೀಡಿದ್ದಾರೆ.
ಈಗ ನಾನು ಮತ್ತು ಸಿಎಂ ಅವರು ನಿಮಗೆ ಕೈ ಮುಗಿದು ಬೆಂಗಳೂರು ಗ್ರಾಮಾಂತರ ಹಾಗೂ ನಗರದ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಮನವಿ ಮಾಡುತ್ತಿದ್ದೇವೆ.
ನೀವೆಲ್ಲರೂ ಒಬ್ಬರು ಹತ್ತು ಪದವೀಧರರನ್ನು ನೋಂದಣಿ ಮಾಡಿಸಿ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಸ್ಥಾನವನ್ನು ನಾವು ಗೆಲ್ಲುವಂತೆ ಮಾಡಬೇಕು. ಆಗ ನಾವು ನೀವು ಹೇಳಿದವರಿಗೆ ಬಿ ಫಾರ್ಮ್ ನೀಡುತ್ತೇವೆ.
ಲೋಕಸಭೆ ಚುನಾವಣೆ ಸಮೀಪಿಸುತ್ತಿದೆ. ಶಿಕ್ಷಕರು ಮನಸ್ಸು ಮಾಡಿದರೆ ಏನೆಲ್ಲಾ ಮಾಡಬಹುದು ಎಂಬುದು ನಮಗೆ ಗೊತ್ತಿದೆ.
ನೀತಿಗೆಟ್ಟ ರಾಜಕಾರಣ ನೋಡಿ ಅಸಹ್ಯವಾಗುತ್ತದೆ.
ನಾವು ಹಾಗೂ ಸಿದ್ದರಾಮಯ್ಯ ಅವರು ಕೋಮುವಾದಿ ಪಕ್ಷ ಬಿಜೆಪಿ ಸಮಾಜವನ್ನು ಒಡೆಯುತ್ತದೆ ಎಂಬ ಕಾರಣಕ್ಕೆ ಅವರನ್ನು ಅಧಿಕಾರದಿಂದ ದೂರವಿಡಲು ಕುಮಾರಸ್ವಾಮಿ ಅವರನ್ನು ಐದು ವರ್ಷಗಳ ಕಾಲ ಬೇಷರತ್ತಾಗಿ ಮುಖ್ಯಮಂತ್ರಿ ಮಾಡಿದೆವು. ಈ ಮೈತ್ರಿ ಸರ್ಕಾರವನ್ನು ಕೆಡವಿದ ಯಡಿಯೂರಪ್ಪ, ಯೋಗೇಶ್ವರ್, ಮುನಿರತ್ನ ಅವರನ್ನೇ ಕುಮಾರಸ್ವಾಮಿ ಅವರು ಅಪ್ಪಿಕೊಂಡು ಅವರ ವಕ್ತಾರರಾಗಿ ಕೆಲಸ ಮಾಡುತ್ತಿದ್ದಾರೆ.ಹಾಗಾಗಿ ಉತ್ತಮರಿಗೆ ಅಧಿಕಾರ ಕೊಡಿ ಎಂದು ಡಿಸಿಎಂ ಅಭಿಪ್ರಾಯ ಪಟ್ಟರು.

By admin

Leave a Reply

Your email address will not be published. Required fields are marked *

Verified by MonsterInsights