ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಬಗ್ಗೆ ಭಾರತ ಆಕ್ಷೇಪ ವ್ಯಕ್ತಪಡಿಸಿದೆ. ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಬಹಳಷ್ಟು ಬದಲಾವಣೆಗಳಾಗ್ತಿವೆ. ಆದರೆ ಭದ್ರತಾ ಮಂಡಳಿ ಕಾಲಕಾಲಕ್ಕೆ ಬೇಕಾದ ಬದಲಾವಣೆಯನ್ನು ಮೈಗೂಡಿಸಿಕೊಂಡಿಲ್ಲ ಎಂದು ಭಾರತ ತನ್ನ ಬೇಸರ ವ್ಯಕ್ತಪಡಿಸಿದೆ. ಅಬ್ಸರ್ವರ್ ರಿಸರ್ಚ್ ಫೌಂಡೇಷನ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಭಾರತದ ಕಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಈ ಅಭಿಪ್ರಯಾ ಹೊರಹಾಕಿದ್ದಾರೆ.

ವಿಶ್ವಸಂಸ್ಥೆ ಸಾಮಾನ್ಯ ಸಭೆ ಅಧ್ಯಕ್ಷ ಡೆನಿಸ್ ಫ್ರಾನ್ಸಿಸ್ ಕೂಡಾ ಇದೇ ಅಭಿಪ್ರೈಆ ವ್ಯಕ್ತಪಡಿಸಿದ್ದಾರೆ. ಜಗತ್ತಿನ ವಿವಿಧ ರಾಷ್ಟ್ರಗಳ ಮಧ್ಯೆ ಸಂಘರ್ಷ ತಪ್ಪಿಸಬೇಕು ಇದಕ್ಕಾಗಿ ಭದ್ರತಾ ಮಂಡಳಿ ಕೆಲಸ ಮಾಡಬೇಕು.ಆದರೆ ಭದ್ರತಾಮಂಡಳಿಯಲ್ಲಿ ಸ್ಥಾನ ಪಡೆದ ರಾಷ್ಟ್ರಗಳು ಪಕ್ಷಪಾತಿಯಾಗಿ ವರ್ತಿಸಿ ಸಂಘರ್ಷ ಹೆಚ್ಚಲು ಕಾರಣವಾಗ್ತಿದೆ ಎಂದು ಅವ್ರು ಹೇಳಿದ್ದಾರೆ.
ಇತ್ತೀಚೆಗೆ ಪ್ಯಾಲಿಸ್ತೇನ್ ನ ಗಾಜಾ ಪ್ರದೇಶದ ಮೇಲೆ ಇಸ್ರೇಲ್ ನಡೆಸಿದ್ದ ದಾಳಿ ನಿಲ್ಲಿಸಿ ಕದನ ವಿರಾಮ ಘೋಷಿಸಬೇಕೆಂಬ ವಿಶ್ವಸಂಸ್ಥೆಯ ನಿರ್ಭಣಯವನ್ನು ಅಮೆರಿಕಾ ವಿಟೋ ಪವರ್ ಬಳಸಿ ತಡೆದಿದ್ದನ್ನು ಇಲ್ಲಿ ಸ್ಮರಿಸಬಹುದು. ರಾಷ್ಟ್ರ ರಾಷ್ಟ್ರಗಳ ಮಧ್ಯೆ ಸಂಘರ್ಷ ತಪ್ಪಿಸಿ ವಿಶ್ವಶಾಂ.ತಿ ಕಾಪಾಡುವ ಹೊಣೆಗಾರಿಕೆಯಿಂದ ಭದ್ರತಾ ಮಂಡಳಿ ಸ್ಥಾಪಿಸಲಾಗಿದ್ದು, ಅಮೆರಿಕಾ, ಇಂಡ್ಲೇಂಡ್, ರಷ್ಯಾ, ಫ್ರಾನ್ಸ್ ಮತ್ತು ಚೀನಾ ದೇಶಗಳು ಖಾಯಂ ಸ್ಥಾನ ಪಡೆದಿವೆ.