Monday, June 23, 2025
26.6 C
Bengaluru
Google search engine
LIVE
ಮನೆಕ್ರಿಕೆಟ್ವಿರಾಟ್​ ಕೊಹ್ಲಿ ಹಣೆ ಮೇಲೆ ಗಾಯ, ಮೂಗಿನ ಮೇಲೆ ಬ್ಯಾಂಡೇಜ್​; ವೈರಲ್​ ಆಗ್ತಿದೆ ಫೋಟೋ

ವಿರಾಟ್​ ಕೊಹ್ಲಿ ಹಣೆ ಮೇಲೆ ಗಾಯ, ಮೂಗಿನ ಮೇಲೆ ಬ್ಯಾಂಡೇಜ್​; ವೈರಲ್​ ಆಗ್ತಿದೆ ಫೋಟೋ

ಭಾರತದ ಮಾಜಿ ನಾಯಕ, ಸ್ಟಾರ್ ಬ್ಯಾಟರ್​ ವಿರಾಟ್​ ಕೊಹ್ಲಿ ಅವರ ಇತ್ತೀಚಿನ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಫೋಟೋ ಕಂಡು ಅವರ ಅಭಿಮಾನಿಗಳು ಒಂದು ಕ್ಷಣ ಗಾಬರಿಗೊಂಡಿದ್ದಾರೆ. ಸೋಮವಾರ, ನವೆಂಬರ್ 27 ರಂದು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಕೊಹ್ಲಿ ಹಾಕಿರುವ ಒಂದು ಫೋಟೋ ಇದಕ್ಕೆಲ್ಲ ಕಾರಣ. ಇದರಲ್ಲಿ ವಿರಾಟ್ ಕೊಹ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರ ಮೂಗಿನ ಮೇಲೆ ಬ್ಯಾಂಡೇಜ್ ಹಾಕಲಾಗಿದೆ. ಹಣೆ ಮತ್ತು ಕೆನ್ನೆಯ ಮೇಲೆ ಗಾಯದ ಗುರುತುಗಳಿವೆ. ಇದನ್ನು ಕಂಡು ಕೊಹ್ಲಿ ಫ್ಯಾನ್ಸ್ ಆಘಾತಕ್ಕೊಳಗಾಗಿದ್ದಾರೆ.

ಆದರೆ, ವಿರಾಟ್​ ಕೊಹ್ಲಿಯ ಆ ಫೋಟೋವನ್ನು ಸೂಕ್ಷ್ಮವಾಗಿ ನೋಡಿದ ನಂತರ, ವಿರಾಟ್ ಕೊಹ್ಲಿ ಬಗ್ಗೆ ಚಿಂತಿಸಬೇಕಾಗಿಲ್ಲ. ಕೊಹ್ಲಿಗೆ ಏನೂ ಆಗಿಲ್ಲ, ಸಂಪೂರ್ಣ ಫಿಟ್ ಆಗಿದ್ದಾರೆ. ಇದು ಕೇವಲ ಮೇಕಪ್ ಅಷ್ಟೆ. ಪ್ರತಿಷ್ಠಿತ ಕಂಪನಿ ಜಾಹೀರಾತುವಿಗಾಗಿ ಈ ಫೋಟೋವನ್ನು ಕೊಹ್ಲಿ ಪೋಸ್ಟ್ ಮಾಡಿದ್ದಾರೆ. ಇದು ಪ್ರಚಾರಕ್ಕಾಗಿ ಮಾತ್ರ. ಹಣೆ-ಕೆನ್ನೆ ಮೇಲೆ ಗಾಯ, ಮೂಗಿನ ಮೇಲೆ ಬ್ಯಾಂಡೇಜ್ ಇದ್ದರೂ ಕೊಹ್ಲಿ ಈ ಫೋಟೋದಲ್ಲಿ ನಗುತ್ತಿದ್ದಾರೆ. ಈ ಫೋಟೋವನ್ನು ಪೋಸ್ಟ್ ಮಾಡುವ ಉದ್ದೇಶವನ್ನು ಸಹ ಕೊಹ್ಲಿ ಬರೆದಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments