ಗದಗ : ಜಲ್ಲೆಯ ರೋಣ ಸಮೀಪದ ಹುಲ್ಲೂರಿನ ಸರ್ಕಾರಿ ಪ್ರಾಥಮಿಕ ಶಾಲೆಯ 1993-94 ಸಾಲಿನ ಹಾಗೂ ಕಲ್ಮೇಶ್ವರ ಪ್ರೌಢಶಾಲೆಯಲ್ಲಿ 1996-97ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿದ ವಿದ್ಯಾರ್ಥಿಗಳು ಗುರು ವಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಸಕಲ ವಾದ್ಯ ಮೇಳ, ಪೂರ್ಣಕುಂಭ ಮೆರವಣಿಗೆಯೊಂದಿಗೆ ಶಿಕ್ಷಕರನ್ನು ವೇದಿಕೆಗೆ ಕರೆತರಲಾಯಿತು. ವಿದ್ಯಾರ್ಥಿಗಳಿಂದ ಗುರುಗಳ ಪಾದಪೂಜೆ ನೆರವೇರಿತು. ಕಾರ್ಯಕ್ರಮಕ್ಕೂ ಮೊದಲು ಅಗಲಿದ ಶಿಕ್ಷಕರಿಗೂ ಹಾಗೂ ಸ್ನೇಹಿತರಿಗೂ ಮೌನಾಚರಣೆ ಮೂಲಕ ಶ್ರದ್ದಾಂಜಲಿ ಅರ್ಪಿಸಲಾಯಿತು.
ಸಾನ್ನಿಧ್ಯ ವಹಿಸಿದ್ದ ರೋಣ ಗುಲಗಂಜಿ ಮಠದ ಗುರುಪಾದ ದೇವರು ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ಶಿಕ್ಷಕ ಆರ್.ಎ ಹೆರಕಲ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ವಿ.ಕೆ ಪಾಟೀಲ, ಎಸ್.ಎಚ್ ಬಂದಿಕೇರಿ, ಎಸ್.ಬಿ ಹೆರಕಲ್ ಬಿ.ವೈ. ಪತ್ತಾರ ಹಾಗೂ ಜೆ.ಎಸ್ ಪಾಟೀಲ ಮಾತನಾಡಿದರು.
ಶಿಕ್ಷಕರನ್ನು ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಲಾಯಿತು. ಮಂಜು ಕೊಪ್ಪದ, ಶರಣು ಹುಲ್ಲೂರು, ಎಸ್.ಜಿ ಅಣ್ಣಿಗೇರಿ, ಪಿ.ವೈ. ಮುಂಡಾಸದವರು, ಹಳೆಯ ವಿದ್ಯಾರ್ಥಿಗಳು, ಸರ್ವ ಗುರು ಬಳಗದವರಿಗೂ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.


