ವಿಚ್ಚೇದನ ಕೋರಿದ್ದ ದಂಪತಿಯನ್ನು ಗವಿಮಠಕ್ಕೆ ಕಳುಹಿಸಿದ ಹೈಕೋರ್ಟ್. ಸ್ವಾಮೀಜಿ ಮಧ್ಯಸ್ಥಿಕೆಯಲ್ಲಿ ಸಮಸ್ಯೆ ಇತ್ಯರ್ಥಮಾಡಿಕೊಳ್ಳಿ ಎಂದು ಧಾರವಾಡ ಹೈಕೋರ್ಟ್ ನ್ಯಾಯಮೂರ್ತಿ ವಿಚ್ಚೆದನ ದಂಪತಿಗಳಿಗೆ ತಿಳಿಸಿದ್ದಾರೆ.ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೆಟ್ಟಿಲೇ ರಿದ್ದ ದಂಪತಿಗಳು ಮೂಲತಃ ಗದಗದವರು ವಿಚ್ಛೇ ದನಕ್ಕಾಗಿ 4 ವರ್ಷದ ಹಿಂದೆ ಧಾರಾವಾಡ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸೆ.17ರಂದು ಅರ್ಜಿ ವಿಚಾ ರಣೆ ನಡೆಸಿದ ನ್ಯಾಯಮೂರ್ತಿ ಶ್ರೀಕೃಷ್ಣ ದೀಕ್ಷಿತ ,ಗಂಡ ಹೆಂಡತಿ ಎಂದರೆ ಸಮಸ್ಯೆ ಇದ್ದದ್ದೇ. ಬೇರೆಯಾಗುವುದು ಸರಿಯಲ್ಲ ಮಾನಸಿಕ ಸಮಸ್ಯೆಯಿದ್ದರೆ ಮನೋವೈದ್ಯರ ಬಳಿ ಹೋಗಿ ಎಂದಿದ್ದಾರೆ.
ದಂಪತಿ ಈಗಾಗಲೇ ವೈದ್ಯರ ಬಳಿಯೂ ಹೋಗಿದ್ದೇವೆ ಎಂದಿದ್ದಾರೆ. ಹಾಗಾದರೆ ಮಠಾಧ ಶರ ಬಳಿ ಹೋಗಿ ಎಂದಾಗ ಗಂಡ, ಗದುಗಿನ ತೋಂಟ ದಾರ್ಯ ಮಠದ ಸ್ವಾಮೀಜಿ, ಪತ್ನಿ ಗವಿಸಿದ್ದೇಶ್ವರ ಸ್ವಾಮೀಜಿ ಬಳಿ ಹೋಗುತ್ತೇವೆ ಎಂದಿದ್ದಾರೆ. ಆಗ ನ್ಯಾಯಮೂರ್ತಿ ಅವರು, ಗವಿಸಿದ್ದೇಶ್ವರ ಸ್ವಾಮೀಜಿ ಬಳಿ ಹೋಗಲು ಹೇಳಿದ್ದು, ಗಂಡ-ಹೆಂಡತಿ ಸೆ.22ರಂದು ಕೊಪ್ಪಳ ಗವಿಸಿದ್ದೇಶ್ವರ ಮಠಕ್ಕೆ ಹೋಗಲಿದ್ದಾರೆ.
ಭಾವೈಕತೆಯ ಸಂಕೇತವಾದ ಕೊಪ್ಪಳ ಗವಿಮಠ ಸಾವಿರಾರು ಬಡಮಕ್ಕಳಿಗೆ ಆಶ್ರಯತಾಣ ಮತ್ತು ವಿದ್ಯಾಕೇಂದ್ರವಾಗಿದೆ.ಇತ್ತಿಚಿಗೆ 5000 ಸಾವಿರ ವಿಧ್ಯಾರ್ಥಿಗಳಿಗೆ ಅನೂಕೂಲವಾಗುವಂತೆ ಪ್ರಸಾದ ನಿಲಯವನ್ನು ನಿರ್ಮಿಸಿದ್ದಾರೆ.ಕಲ್ಯಾಣ ಕರ್ನಾಟಕದ ಮಕ್ಕಳು ವಿದ್ಯಾವಂತರಾಗಲಿ ಎಂಬ ಕಾರಣಕ್ಕೆ ಶ್ರೀಗಳು ಶೈಕ್ಷಣಿಕ ಕ್ರಾಂತಿಯನ್ನು ಶುರು ಮಾಡಿದ್ದಾರೆ.ಎಲ್ಲಾ ವರ್ಗದವರಿಗು ಅವಕಾಶವನ್ನು ಕಲ್ಪಿಸಿದ್ದಾರೆ.