
ಯಾದಗಿರಿ: ವಿಚಾರಣೆ ಎಂದು ಠಾಣೆ ಕರೆದೊಯ್ದು ವ್ಯಕ್ತಿಗೆ ಮನಬಂದಂತೆ ಪೋಲಿಸರು ಥಳಿಸಿದ ಘಟನೆ ಯಾದಗಿರಿಯಲ್ಲಿ ನಡೆದಿದೆ. ಪೊಲೀಸರು ಹೊಡೆತಕ್ಕೆ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿದ್ದಾರೆ..
ಕೆಲ ದಿನಗಳ ಹಿಂದೆ ಸಾದಿಕ್ ಅನ್ನುವ ವ್ಯಕ್ತಿ ಅಪಘಾತ ಆದ ಹಿನ್ನೆಲೆಯಲ್ಲಿ 3 ದಿನಗಳ ಹಿಂದೆ ವಿಚಾರಣೆಗೆ ಎಂದು ಠಾಣೆಗೆ ಕರೆದೊಯ್ದು ಬಾಸುಂಡೆ ಬರುವ ಹಾಗೆ ಹೊಡೆದಿದ್ದಾರೆ ಎಂದು ಕುಟುಂಬಸ್ಥರು ಕೆಂಭಾವಿ PSI ಮತ್ತು ಹುಣಸಗಿ CPI ಅವರ ಮೇಲೆ ಗಂಭಿರ ಆರೋಪ ಆರೋಪ ಮಾಡಿದ್ದಾರೆ. ಪೊಲೀಸರ ಏಟಿನಿಂದ ಗಾಯಗೊಂಡಿರುವ ಸಾದಿಕ್ ಎನ್ನುವ ವ್ಯಕ್ತಿಗೆ ಕಲಬುರಗಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.


