#Exclusive NewsTop Newsದೇಶ/ವಿದೇಶಸುದ್ದಿ

ವರ್ಷದ ಮೊದಲ ದಿನವೇ ಗುಡ್​​ನ್ಯೂಸ್​; ಸಿಲಿಂಡರ್ ಬೆಲೆಯಲ್ಲಿ ಇಳಿಕೆ

ಇಂಡಿಯನ್ ಆಯಿಲ್ ಇತ್ಯಾದಿ ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳು ಹೊಸ ವರ್ಷಕ್ಕೆ ಎಲ್​ಪಿಜಿ ದರಗಳನ್ನು ಇಳಿಸಿವೆ. ಕಮರ್ಷಿಯಲ್ ಎಲ್​ಪಿಜಿ ಸಿಲಿಂಡರ್​ಗಳು ತುಸು ಅಗ್ಗಗೊಂಡಿವೆ. 19 ಕಿಲೋ ಕಮರ್ಷಿಯಲ್ ಎಲ್​ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ 14.5 ರೂನಿಂದ 16 ರೂವರೆಗೆ ಇಳಿಕೆ ಆಗಿದೆ. ಬೆಂಗಳೂರಿನಲ್ಲಿ 14.5 ರೂನಷ್ಟು ಇಳಿಕೆ ಆಗಿದೆ. ಇನ್ನು, 47 ಕಿಲೋ ಕಮರ್ಷಿಯಲ್ ಸಿಲಿಂಡರ್ ಬೆಲೆ 36.50 ರೂನಷ್ಟು ಕಡಿಮೆ ಆಗಿದೆ. ಆದರೆ, ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್​ಗಳ ಬೆಲೆಯಲ್ಲಿ ಬದಲಾವಣೆ ಆಗಿಲ್ಲ.

ಕಮರ್ಷಿಯಲ್ ಸಿಲಿಂಡರ್​ಗಳ ಬೆಲೆ ಆರು ತಿಂಗಳ ಬಳಿಕ ಮೊದಲ ಬಾರಿಗೆ ಕಡಿಮೆ ಆಗಿದೆ. 14.2 ಕಿಲೋ ಮತ್ತು 5 ಕಿಲೋ ಎಲ್​ಪಿಜಿ ಸಿಲಿಂಡರ್​ಗಳು ಗೃಹಬಳಕೆಗೆ ಸೀಮಿತವಾಗಿವೆ. 19 ಕಿಲೋ ಮತ್ತು 47 ಕಿಲೋ ಸಿಲಿಂಡರ್​ಗಳು ವಾಣಿಜ್ಯ ಬಳಕೆಗೆ ಇವೆ.

ಬೆಂಗಳೂರಿನಲ್ಲಿ ಎಲ್​ಪಿಜಿ ದರಗಳ ಪಟ್ಟಿ

  • 14.2 ಕಿಲೋ ಗೃಹ ಬಳಕೆ ಎಲ್​ಪಿಜಿ: 805.50 ರೂ (ಬದಲಾವಣೆ ಇಲ್ಲ)
  • 5 ಕಿಲೋ ಗೃಹಬಳಕೆ ಎಲ್​ಪಿಜಿ: 300.50 ರೂ (ಬದಲಾವಣೆ ಇಲ್ಲ)
  • 19 ಕಿಲೋ ಕಮರ್ಷಿಯಲ್ ಎಲ್​ಪಿಜಿ: 1,880.50 ರೂ (14.50 ರೂ ಇಳಿಕೆ)
  • 47.5 ಕಿಲೋ ಕಮರ್ಷಿಯಲ್ ಎಲ್​ಪಿಜಿ: 4,697.50 ರೂ (36.50 ರೂ ಇಳಿಕೆ)

ಜುಲೈ 1ರ ಬಳಿಕ 19 ಕಿಲೋ ಸಿಲಿಂಡರ್​ಗಳ ಬೆಲೆ ಮೊದಲ ಬಾರಿಗೆ ಇಳಿಕೆ ಆಗಿದೆ. ಗೃಹಬಳಕೆ ಎಲ್​ಪಿಜಿ ಸಿಲಿಂಡರ್ ಬೆಲೆ ಮಾರ್ಚ್ 1ರಂದು ಇಳಿಕೆ ಆಗಿತ್ತು. ಅದಾದ ಬಳಿಕ ಯಾವ ಬದಲಾವಣೆ ಕಂಡಿಲ್ಲ. ತೈಲ ಮಾರುಕಟ್ಟೆ ಕಂಪನಿಗಳು ಪ್ರತೀ ತಿಂಗಳ ಮೊದಲ ದಿನದಂದು ದರ ಪರಿಷ್ಕರಣೆ ಮಾಡುತ್ತವೆ.

ವಿಮಾನ ಇಂಧನ ಬೆಲೆಯಲ್ಲೂ ಇಳಿಕೆ

ವಿಮಾನಗಳಿಗೆ ಬಳಸಲಾಗುವ ಎಟಿಎಫ್ ಅಥವಾ ಏವಿಯೇಶನ್ ಟರ್ಬೈನ್ ಫುಯಲ್ ಅಥವಾ ಜೆಟ್ ಫುಯೆಲ್ ಇಂಧನದ ಬೆಲೆ ಶೇ. 1.54ರಷ್ಟು ಕಡಿಮೆ ಆಗಿದೆ. ಪ್ರತೀ ಕಿಲೋ ಲೀಟರ್​ಗೆ 1,401.37 ರೂನಷ್ಟು ಬೆಲೆ ಇಳಿಕೆ ಆಗಿದೆ. ದೆಹಲಿಯಲ್ಲಿ ಜೆಟ್ ಫುಯೆಲ್ ಬೆಲೆ ಪ್ರತೀ ಕಿಲೋ ಲೀಟರ್​ಗೆ 90,455.47 ರೂ ಆಗಿದೆ. ಈ ಬೆಲೆ ಇಳಿಕೆಯು ಏವಿಯೇಶನ್ ಸಂಸ್ಥೆಗಳಿಗೆ ತುಸು ನಿರಾಳ ತರುವ ಸಾಧ್ಯತೆ ಇದೆ.

Comments (0)

Your email address will not be published. Required fields are marked *

Back to top button