ನವದೆಹಲಿ: ಲೋಕಸಭೆ ಚುನಾವಣೆಯ ಕಾವು ಏರತೊಡಗಿದೆ. ಚುನಾವಣೆ ಘೋಷಣೆ ದಿನಗಣನೆ ಶುರುವಾಗಿದೆ. ಈಗಾಗಲೇ ತಮ್ಮ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಹಾಗೂ ಕಾಂಗ್ರೆಸ್ ಘೋಷಿಸಿವೆ. ಇನ್ನು ಹಲವು ಕ್ಷೇತ್ರ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಸಿದ್ದತೆ ಮಾಡಿಕೊಳ್ತಿವೆ. ಬಾಕಿ ಇರುವ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆಯತ್ತ ಚಿತ್ತ ನೆಟ್ಟಿದೆ. ಇಂತಹ ಸಂದರ್ಭದಲ್ಲಿ ಚುನಾವಣೋತ್ತರ ಸಮೀಕ್ಷೆಗಳು ಈಗ ಒಂದೊಂದಾಗಿ ಹೊರ ಬರುತ್ತಿವೆ. ಇತ್ತೀಚೆಗೆ ಟೈಮ್ಸ್ ನೌ ಮತ್ತು ಇಟಿಜಿಯ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯ ಪ್ರಕಾರ ಎನ್ ಡಿ ಎ ಮೈತ್ರಿಕೂಟ ಈ ಬಾರಿ 400 ರ ಗಡಿಗೆ ಬರಲಿದೆ ಎಂದು ವರದಿಯಾಗಿದೆ. ಟೈಮ್ಸ್ ನೌ ಸುದ್ದಿವಾಹಿನಿ ಇಟಿಜಿ ಜೊತೆಗೂಡಿ ನಡೆಸಿ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ, ಬಿಜೆಪಿ 358-398 ಸ್ಥಾನ ಮತ್ತು ಕಾಂಗ್ರೆಸ್ 28-48 ಸ್ಥಾನ ಗಳಿಸಲಿದೆ ಎಂದು ತಿಳಿದು ಬಂದಿದೆ.
ಯಾವುದೇ ಸಮಯದಲ್ಲಿ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗುವ ನಿರೀಕ್ಷೆಯಲ್ಲಿ ಎಲ್ಲ ಪಕ್ಷಗಳು ಇರುವಾಗ, ಬಹಿರಂಗವಾಗಿರುವ ಈ ಸಮೀಕ್ಷಾ ಫಲಿತಾಂಶ, ರಾಜಕೀಯ ಪಕ್ಷಗಳ ನಿದ್ದೆಗೆಡಿಸಿದೆ. ಈ ಬಾರಿ ಬಿಜೆಪಿ 400 ಸ್ಥಾನಕ್ಕೆ ಬಹುತೇಕ ಸಮೀಪವಿದೆ ಎಂಬ ಮಾಹಿತಿ ದೊರೆತಿದೆ. ಈ ಸಮೀಕ್ಷೆ ಪ್ರಕಾರ
ಯಾವ ರಾಜ್ಯಗಳಲ್ಲಿ ಎಷ್ಟೆಷ್ಟು…?
ಮಹಾರಾಷ್ಟ್ರ: ಎನ್‍ಡಿಎ 34-38, ಇಂಡಿಯಾ 9-13
ಮಧ್ಯಪ್ರದೇಶ: ಬಿಜೆಪಿ-28-29, ಇಂಡಿಯಾ 0-1
ಪಶ್ಚಿಮ ಬಂಗಾಳದಲ್ಲಿ ಎನ್‍ಡಿಎ 20-24, ಟಿಎಂಸಿ 17-21, ಇಂಡಿಯಾ 0-2
ತಮಿಳುನಾಡು: ಇಂಡಿಯಾ 29-35, ಬಿಜೆಪಿ 2-6, ಎಐಎಡಿಎಂಕೆ 1-3
ಆಂಧ್ರಪ್ರದೇಶ: ವೈಎಸ್‍ಆರ್ ಕಾಂಗ್ರೆಸ್ 21-22, ಟಿಡಿಪಿ-ಜನಸೇನಾ 3-4
ರಾಜಸ್ಥಾನ: ಬಿಜೆಪಿ 20-24, ಇಂಡಿಯಾ 0-1
ಬಿಹಾರ: ಎನ್‍ಡಿಎ 34-39, ಇಂಡಿಯಾ 0-2
ಜಾರ್ಖಂಡ್: ಎನ್‍ಡಿಎ 12-14, ಇಂಡಿಯಾ 0-2
ಒಡಿಶಾ: ಬಿಜೆಪಿ 10-11, ಬಿಜೆಡಿ 10-11, ಇಂಡಿಯಾ 0-1
ಈ ಎಲ್ಲ ರಾಜ್ಯಗಳಲ್ಲಿ ಇಷ್ಟು ಸ್ಥಾನಗಳನ್ನು ಎನ್ ಡಿ ಎ ಮೈತ್ರಿಕೂಟ ಜಯಭೇರಿ ಬಾರಿಸಬಹುದು ಎಂದು ಸಮೀಕ್ಷೆ ತಿಳಿಸಿದೆ.
ಕರ್ನಾಟಕ ರಾಜ್ಯದಲ್ಲಿನ 28 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 21 ರಿಂದ 23 ಸ್ಥಾನಗಳಿಸಲಿದೆ. ಕಾಂಗ್ರೆಸ್ 4-6 ಸ್ಥಾನ, ಜೆಡಿಎಸ್ 1-2 ಸ್ಥಾನ ಗೆಲ್ಲಬಹುದು ಎಂದು ಈ ಸಮೀಕ್ಷೆ ತಿಳಿಸಿದೆ. ಆದರೆ, ಸದ್ಯದ ಪರಿಸ್ಥಿತಿಗೆ ಅನುಗುಣವಾಗಿ ಈ ಸರ್ವೆ ಫಲಿತಾಂಶ ಬಂದಿದೆ ಎನ್ನಲಾಗಿದೆ. ಇನ್ನು ಎರಡು ತಿಂಗಳು ಫಲಿತಾಂಶಕ್ಕೆ ಬಾಕಿ ಇರುವುದರಿಂದ, ಮತ್ತೆ ಏರುಪೇರಾಗುವ ಸಾಧ್ಯತೆಯೂ ಇದೆ. ಕಾಂಗ್ರೆಸ್ ಪಕ್ಷವು ಸಮೀಕ್ಷೆಯ ಲೆಕ್ಕಾಚಾರವನ್ನು ತಳ್ಳಿ ಹಾಕಿದ್ದರೆ, ಈ ಬಾರಿ ಮತ್ತೆ ಗೆಲ್ಲುವ ಕನಸು ಕಾಣುತ್ತಿರುವ ಬಿಜೆಪಿಯ ಮಾತ್ರ, ಪ್ರಧಾನಿ ನರೇಂದ್ರ ಮೋದಿಯ ಅಭಿವೃದ್ಧಿ ಕಾರ್ಯಗಳಿಗೆ ಮತದಾರ ಜೈ ಎಂದಿದ್ದಾನೆ ಎಂದು ಬಣ್ಣಿಸಿದೆ.

By admin

Leave a Reply

Your email address will not be published. Required fields are marked *

Verified by MonsterInsights