ಜನಸಾಮಾನ್ಯರ ದನಿಜಿಲ್ಲೆರಾಜ್ಯ

ರೈತನ ಮಗನಿಗೆ ಹೆಣ್ಣುಕೊಡ್ಸಿ ಮೇಡಂ..! ; ಡಿಸಿ ಮುಂದೆ ಕಣ್ಣೀರಿಟ್ಟ ವೃದ್ಧ

ತುಮಕೂರು : ರೈತನ ಮಗನಿಗೆ ಹೆಣ್ಣುಕೊಡ್ಸಿ ಮೇಡಂ ಎಂದು ಜಿಲ್ಲಾಧಿಕಾರಿ ಮುಂದೆ ವೃದ್ಧನೊರ್ವ ಅಳಲು ತೊಡಿಕೊಂಡಿದ್ದಾನೆ. ತುಮಕೂರಿನ ಶಿರಾದಲ್ಲಿ ನಡೆದ ಜನತಾದರ್ಶನ ಕಾರ್ಯಕ್ರಮದಲ್ಲಿ ಡಿಸಿಗೆ ವೃದ್ದ ಮನವಿ ಮಾಡಿದ್ದಾನೆ.

ಜನತಾದರ್ಶನ ಕಾರ್ಯಕ್ರಮದಲ್ಲಿ ತುಮಕೂರಿನ ನೂತನ ಜಿಲ್ಲಾಧಿಕಾರಿ ಶುಭಕಲ್ಯಾಣ್ ಮುಂದೆ ರೈತನ ಮಗನಿಗೆ ಹೆಣ್ಣು ಕೊಡಿಸಿ ಎಂದು ರೈತ ಜನರಾಮಪ್ಪ ಕಣ್ಣೀರಿಟ್ಟಿದ್ದಾರೆ. ರೈತನ ಮನವಿ ಕಂಡು ಶಾಸಕ ಟಿ.ಬಿ.ಜಯಚಂದ್ರ, ಅಧಿಕಾರಿಗಳು ಶಾಕ್ ಆಗಿದ್ದರು. ರೈತರ ಮಕ್ಕಳಿಗೆ ಹೆಣ್ಣು ಕೊಡಲ್ಲ ಅಂತಾರೆ.. ನನ್ನ ಮಕ್ಕಳಿಗೆ ಹೆಣ್ಣು ಕೊಡಿಸಬೇಕು ಎಂದು ಶಿರಾ ತಾಲೂಕಿನ ಚಿಕ್ಕನಕೋಟೆ ಗ್ರಾಮದ ಜಯರಾಮಪ್ಪ ವಿಭಿನ್ನ ಕೋರಿಕೆ ವ್ಯಕ್ತಪಡಿಸಿದರು. ಎಲ್ಲಾ ಸವಲತ್ತು ಕೊಡಿಸೋ ಸರ್ಕಾರ ಹೆಣ್ಣು ಕೊಡಿಸೋಕೆ ಆಗಲ್ವೆ ಎಂದು ಪ್ರಶ್ನಿಸಿದರು. ಸುಮಾರು 8 ವರ್ಷಗಳಿಂದ ಕೃಷಿಕ ಮಗನಿಗಾಗಿ ಹೆಣ್ಣು ಹುಡುಕಿ ಸಾಕಾಗಿದ ರೈತ ಜನರಾಮಪ್ಪನಿಗೆ ಜಿಲ್ಲಾಧಿಕಾರಿ ಶುಭಕಲ್ಯಾಣ್ ಹಾಗೂ ಅಧಿಕಾರಿಗಳಿಂದ ನೋಡೋಣ ಅನ್ನೋ ಉತ್ತರ ಸಿಕ್ಕಿದೆ.


Comments (0)

Your email address will not be published. Required fields are marked *

Back to top button