ಆರೋಗ್ಯಜನಸಾಮಾನ್ಯರ ದನಿಜಿಲ್ಲೆ

ರಾಯಭಾಗ ಸರ್ಕಾರಿ ಆಸ್ಪತ್ರೆಗಳಲ್ಲಿ ಹಣ ಕೊಟ್ರೆ ಮಾತ್ರ ಟ್ರೀಟ್ಮೆಂಟ್!

ಬೆಳಗಾವಿ : ಮೈಸೂರಿನ ಆಸ್ಪತ್ರೆಯೊಂದರಲ್ಲಿ ಭ್ರೂಣ ಹತ್ಯೆ ಪ್ರಕರಣ ಬಯಲಾದ ಬೆನ್ನಲ್ಲೆ ರಾಜ್ಯ ವಿವಿಧ ಆಸ್ಪತ್ರೆಗಳ ಅವ್ಯವಸ್ಥೆಗಳು ಬೀದಿಗೆ ಬರುತ್ತಿವೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕು ಆಸ್ಪತ್ರೆಯಲ್ಲಿ ಅವ್ಯವಸ್ಥೆ ಆಗರವಾಗಿದೆ. ಮೂಲಸೌಕರ್ಯ ಒದಗಿಸದೇ ರೋಗಿಗಳಿಗೆ ತೊಂದರೆ ಕೊಡಲಾಗುತ್ತಿದೆ. ಹಣ ಕೊಟ್ರೆ ಮಾತ್ರ ಟ್ರೀಟ್ಮೆಂಟ್ ಇಲ್ಲಾಂದ್ರೆ ನೋ ಟ್ರೀಟ್ಮೆಂಟ್ ಅನ್ನುವಂತಾಗಿದೆ.

ಬಡ ರೋಗಿಗಳಿಗೆ ಮೂಲಸೌಕರ್ಯ ಕೊಡದೆ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಹಾಗೂ ವೈದ್ಯರು ಕಷ್ಟ ನೀಡುತ್ತಿದ್ದಾರೆ. ಬಾಣಂತಿಯರಿಗೆ ಬಿಸಿ ನೀರಿನ ಸೌಲಭ್ಯ ಹಾಗೂ ಪೌಷ್ಟಿಕ ಆಹಾರ ನೀಡುತ್ತಿಲ್ಲ. ಸರ್ಕಾರದಿಂದ ಆಸ್ಪತ್ರೆ ಮೂಲಸೌಕರ್ಯಕ್ಕೆ ಸಾಕಷ್ಟು ಅನುಧಾನ ಬಂದರೂ ಸರಿಯಾಗಿ ವೈದ್ಯರು ಹಾಗೂ ಸಿಬ್ಬಂದಿ ಸದ್ಬಳಕೆ‌ ಮಾಡುತ್ತಿಲ್ಲ. ಸೋಲಾರ್ ಇದ್ದರೂ ಇಲ್ಲದ ಹಾಗೆ, ಬಿಸಿ‌ ನೀರು ಬಂದ್ ಆದರೂ ಅಧಿಕಾರಿಗಳು ಡೋಂಟ್ ಕೇರ್ ಎನ್ನುತ್ತಿದ್ದಾರೆ. ಸ್ಥಳೀಯ ಶಾಸಕರು ಕೂಡ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಗಮನ ಹರಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ತಾಲ್ಲೂಕು ವೈದ್ಯಾಧಿಕಾರಿ ಡಾ.ರಂಗನ್ನವರ ನಿರ್ಲಕ್ಷ್ಯ ತೋರಬಾರದು, DHO, ಆರೋಗ್ಯ ಸಚಿವರು ಆಸ್ಪತ್ರೆಗೆ ಭೇಟಿ ನೀಡಿ ಸಮಸ್ಯೆ ಪರಿಹರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Comments (0)

Your email address will not be published. Required fields are marked *

Back to top button