ಬೆಳಗಾವಿ: ನಿಮ್ಮ ರಾಮ ಮಂದಿರ ಸ್ಪೋಟಿಸುತ್ತೇವೆ, ಸುಧಾರಿಸಿಕೊಳ್ಳಿ ಎಂದು ಬೆದರಿಕೆ ಪತ್ರ ಹಾಕಿದ ಸಂಚಲನ ಮೂಡಿಸುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಅಲ್ಲಾ ಹು ಅಕ್ಬರ್ ಹೆಸರಿನಲ್ಲಿ ಬೆದರಿಕೆ ಪತ್ರ ಬರೆಯಲಾಗಿದೆ. ರಾಮ ಮಂದಿರವನ್ನು ದೊಡ್ಡ ಪ್ರಮಾಣದಲ್ಲಿ ಸ್ಪೋಟಿಸುತ್ತೇವೆ ಎಂದು ಬೆದರಿಕೆ ಪತ್ರ ಬರೆದು, ಅನಾಮಧೇಯ ವ್ಯಕ್ತಿಗಳು ಮಂದಿರದಲ್ಲಿ ಬಿಟ್ಟು ಹೋಗಿದ್ದಾರೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದ ಶ್ರೀ ರಾಮ ಮಂದಿರ ದಲ್ಲಿ ಈ ಪತ್ರ ಪತ್ತೆಯಾಗಿದೆ. ಫೆ 7 ಹಾಗೂ 28ರಂದು ಈ ಬೆದರಿಕೆ ಪತ್ರಗಳನ್ನು ಬರೆಯಲಾಗಿದೆ. ಮಾರ್ಚ 20,21ರಂದು ಒಳಗಡೆ ಸ್ಪೋಟಿಸುತ್ತೇವೆ ಎಂದು ಪತ್ರದಲ್ಲಿ ಮಾಹಿತಿ ಇದೆ.
ಬೆಳಗಾವಿ ಜಿಲ್ಲಾ ಪೊಲೀಸ್ ಹೈ ಅಲರ್ಟ್ ಘೋಷಿಸಿದ್ದಾರೆ. ಮಂದಿರದ ಆವರಣದಲ್ಲಿ ೧೪ ಸಿಸಿಟಿವಿ ಅಳವಡಿಕೆ ಅಳವಡಿಸಿದ್ದಾರೆ.
ಸತತ ಪೋಲಿಸ್ ಬಂದು ಬಸ್ತ್ ಮಾಡಿದ್ದಾರೆ. 101 ವರ್ಷಗಳ ಇತಿಹಾಸ ಹೊಂದಿದ ನಿಪ್ಪಾಣಿ ಶ್ರೀ ರಾಮ ಮಂದಿರ ಇದಾಗಿದ್ದು,
ಮೊದಲನೆಯ ಪತ್ರ 7ನೇ ಫೆಬ್ರುವರಿಯಂದು ನಿಪ್ಪಾಣಿ ಮಂದಿರದ ಆವರಣದ ಹನುಮಾನ ಮಂದಿರದಲ್ಲಿ ಪತ್ತೆಯಾಗಿದೆ.
ಎರಡನೇಯ ಪತ್ರ 28 ಪೆಬ್ರುವರಿ ರಾಮ ಮಂದಿರ ಗರ್ಭ ಗುಡಿಯಲ್ಲಿ ಪತ್ತೆಯಾಗಿದೆ. ನಿಪ್ಪಾಣಿ ಶಹರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ರಾಮ ಮಂದಿರ ಸ್ಪೋಟಿಸುತ್ತೇವೆ, ಅಲ್ಲಾ ಹು ಅಕ್ಬರ್ ಹೆಸರಿನಲ್ಲಿ ಬೆದರಿಕೆ..
RELATED ARTICLES