Thursday, January 29, 2026
16.9 C
Bengaluru
Google search engine
LIVE
ಮನೆ#Exclusive Newsಯೋಗಿ ವಿರುದ್ದ ಪುತ್ರಿ ನಿಶಾ ಸಮರ!

ಯೋಗಿ ವಿರುದ್ದ ಪುತ್ರಿ ನಿಶಾ ಸಮರ!

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲೇ ಮಾಜಿ ಸಚಿವ ಸಿ.ಪಿ.ಯೋಗೇ ಶ್ವರ್ ವಿರುದ್ದ ಅವರ ಪುತ್ರಿ ನಿಶಾ ಯೋಗೇಶ್ವರ್‌ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದು, ಎಲ್ಲವನ್ನೂ ಬೆಳಕಿಗೆ ತರುತ್ತೇನೆ ಎಂದು ಗುಡುಗಿದ್ದಾರೆ. ಸೋಮವಾರ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಅವರು ಯೋಗೇಶ್ವರ್ ಹೆಸರು ಹೇಳದೆಯೇ ತೀವ್ರ ವಾಗ್ದಾಳಿ ನಡೆಸಿದ್ದಾರೆ.

‘ನಾನು ರಾಜಕೀಯಕ್ಕೆ ಬರದಂತೆ ತಡೆದರು. ಸಮಾಜ ಸೇವೆಗೆ ಇಳಿಯದಂತೆ ತಡೆದರು. ವಿದ್ಯಾಭ್ಯಾಸ ಮಾಡದಂತೆ ತಡೆದರು. ಯಾವ ಕ್ಷೇತ್ರದಲ್ಲೂ ಮುಂದೆ ಬರಲು ಬಿಡುತ್ತಿಲ್ಲ. ಕೊನೆಗೆ, ಜೀವನದಲ್ಲಿ ನೆಮ್ಮದಿಯಾಗಿರುವುದಕ್ಕೂ ಬಿಡುತ್ತಿಲ್ಲ. ನನ್ನ ಜೀವನದ ಸತ್ಯವನ್ನು ಹೊರತರುತ್ತೇನೆ’ ಎಂದು ಹೇಳಿದ್ದಾರೆ. ‘ನನ್ನಿಂದ ಏನು ಸಮಸ್ಯೆ, ಏಕೆ ದ್ವೇಷ ತಿಳಿಯುತ್ತಿಲ್ಲ. ನಿಜವಾದ ಕಥೆ ಬೇರೆಯೇ ಇದೆ, ಸತ್ಯ ಬೇರೆಯೇ ಇದೆ. ಆ ಸತ್ಯವನ್ನು ಬೇಗ ಹೊರಗಡೆ ತರುತ್ತೇನೆ’ ಎಂದರು. ವಿವಾದದ ಹಿನ್ನೆಲೆ: ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ಯೋಗೇಶ್ವ‌ರ್ ಹಾಗೂ ಪುತ್ರಿ ನಿಶಾ ಮಧ್ಯೆ ಕಳೆದ 4-5 ತಿಂಗಳಿಂದ ವೈಮನಸ್ಸು ಮೂಡಿದೆ ಎನ್ನಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಲ್ಲಿ ನಿಶಾ ಅವರು ತಂದೆ ಪರ ಪ್ರಚಾರ ನಡೆಸಿದ್ದರು. ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ ಸೇರಲು ಪ್ರಯತ್ನ ನಡೆಸಿದ್ದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments