ಚಿನ್ನದ ರಾಣಿಯ ಕೌತುಕ ಜಗತ್ತು
ಈ ಚಿನ್ನದ ರಾಣಿ ಗೆದ್ದಿರುವುದು ಬರೋಬ್ಬರಿ ೫೨ ಗೋಲ್ಡ್ ಮೆಡಲ್ ,ಅಂತರಾಷ್ಟ್ರೀಯ ಯೋಗ ಚಾಂಪಿಯನ್ ಆಗಿರುವ ಕೀರ್ತಿ ಈಕೆಯದ್ದು. ಅಚಲವಾದ ನಂಬಿಕೆ ಮತ್ತು ದೃಢವಾದ ಆತ್ಮವಿಶ್ವಾಸ ಈಕೆಯನ್ನ ಎತ್ತರಕ್ಕೆ ಬೆಳಸಿದೆ , ತಾಯಿ ಹಾಕಿಕೊಟ್ಟ ಮಾರ್ಗದಲ್ಲಿ ನಡೆದಿದ್ದಾಳೆ. ಚಿನ್ನದ ರಾಣಿ ಸೃಷ್ಟಿಯ ತಾಯಿ ಕೂಡ ಯೋಗ ಶಿಕ್ಷಕಿಯಾಗಿದ್ದವರು . ತಾಯಿ ಶಾಂಭವಿ ಇಷ್ಟೊಂದು ಸಾಧನೆ ಮಾಡದಿದ್ದರೂ ತಾಯಿಯ ಕನಸು ನನಸು ಮಾಡುತ್ತಿರುವ ಸೃಷ್ಟಿ ಯೋಗಾಸನದಲ್ಲಿ ಸೃಷ್ಟಿಸಿರುವ ದಾಖಲೆ ಶ್ಲಾಘನೀಯವಾದದ್ದು .ನೇಪಾಳ, ಜಮ್ಮುವಿನಲ್ಲಿ ನಡೆದ ಯೋಗಾಸನ ಸ್ಪರ್ಧೆಯಲ್ಲಿ ಕಂಚು ಮತ್ತು ಚಿನ್ನದ ಪದಕ ಗೆದ್ದಿದ್ದಾಳೆ. ಕಳೆದ 3 ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಿರುವ ಈಕೆ ತನ್ನ ಶರೀರವನ್ನು ಹೇಗೆ ಬೇಕಾದರೂ ತಿರುಗಿಸುವ ಸಾಮರ್ಥ್ಯ ಹೊಂದಿದ್ದಾಳೆ. ಈ ಯೋಗ ಎಲ್ಲರಿಗೂ ಒಲಿಯುವಂಥದ್ದಲ್ಲ. ಸಾಕಷ್ಟು ಪರಿಶ್ರಮ, ಶ್ರಮ ಬೇಕು. ಇದಕ್ಕೆ ಕಠಿಣ ಅಭ್ಯಾಸ ಇರಲೇಬೇಕು.ಅಂತರರಾಷ್ಟ್ರೀಯ, ರಾಷ್ಟ್ರೀಯ, ಅಂತರರಾಜ್ಯ, ರಾಜ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಇತ್ತೀಚೆಗೆ ಅವರು ತಾಲೂಕು, ಜಿಲ್ಲೆ, ವಿಭಾಗ ಮತ್ತು ರಾಜ್ಯ ಮತ್ತು ರಾಷ್ಟ್ರೀಯ ಎಸ್‌ಜಿಎಫ್‌ಐ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಈ ವರ್ಷ ಜೈಪುರದಲ್ಲಿ ನಡೆದ ಭಾರತದ ಸಾಂಪ್ರದಾಯಿಕ ಯೋಗಾಸನ 67 ನೇ ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ 4 ನೇ ಸ್ಥಾನವನ್ನು ಗೆದ್ದಿದ್ದಾಳೆ.
ಇವರ ಗಳಿಸಿದ ಪದಕಗಳು ಯಾವುವು ಗೊತ್ತಾ?
150 ಪಂದ್ಯಾವಳಿಗಳಲ್ಲಿ ಸ್ಪರ್ಧೆ ಮಾಡಿ ಚಿನ್ನದ ಪದಕ-52, ಬೆಳ್ಳಿ-4, ಕಂಚು-4, ಪ್ರಶಸ್ತಿಗಳು 20 ಬಂದಿದ್ದು, ಆರು ದಾಖಲೆಗಳನ್ನು ಮಾಡಿದ ಶ್ರೇಯ ಈಕೆಯದ್ದು.ಬ್ಯೂಟಿಫುಲ್ ಸ್ಮೈಲ್ ಅವಾರ್ಡ್ಗೂ ಭಾಜನರಾಗಿದ್ದಾರೆ. ಇಂತಹ ಮಗಳನ್ನ ಪಡೆದ ನಾನು ಧನ್ಯ ಎನ್ನುತ್ತಿದ್ದಾರೆ ಸೃಷ್ಠಿ ತಾಯಿ.


