Thursday, November 20, 2025
22.5 C
Bengaluru
Google search engine
LIVE
ಮನೆUncategorizedಯಾರಾಗ್ತಾರೆ ಪಾಕಿಸ್ತಾನದ ಪ್ರಧಾನಿ? ನವಾಜ್ ಷರೀಫ್ ಅದೃಷ್ಟ ಪರೀಕ್ಷೆ!

ಯಾರಾಗ್ತಾರೆ ಪಾಕಿಸ್ತಾನದ ಪ್ರಧಾನಿ? ನವಾಜ್ ಷರೀಫ್ ಅದೃಷ್ಟ ಪರೀಕ್ಷೆ!

ಬಹುನಿರೀಕ್ಷಿತ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಗೆ ಕೊನೆಗೂ ಕಾಲ ಕೂಡಿ ಬಂದಿದೆ. ಇಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೂ ಪಾಕಿಸ್ತಾನದ 266 ಕ್ಷೇತ್ರದಲ್ಲಿ ಮತದಾನ ನಡೆಯುತ್ತಿದೆ. ಮಾಜಿ ಪ್ರಧಾನಿ ನವಾಜ್ ಷರೀಫ್, ಜೈಲಿನಲ್ಲಿರುವ ಮತ್ತೊಬ್ಬ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಬೆನ್‌ಜೀರ್‌ ಭುಟ್ಟೋ ಅವರ ಮಗ ಬಿಲಾವಲ್ ಭುಟ್ಟೋ ಅವರ ಅದೃಷ್ಟ ಪರೀಕ್ಷೆ ನಡೆಯಲಿದೆ.
 
ನಿರಂತರ ಭಯೋತ್ಪಾದಕರ ದಾಳಿಗಳು, ಆರ್ಥಿಕ ದಿವಾಳಿತನದ ಮಧ್ಯೆ ಪಾಕಿಸ್ತಾನದ ಈ ಬಾರಿಯ ಚುನಾವಣೆ ಮಹತ್ವ ಪಡೆದುಕೊಂಡಿದೆ. ಇಂದು 12 ಕೋಟಿ 80 ಲಕ್ಷ ಮತದಾರರು 5128 ಅಭ್ಯರ್ಥಿಗಳ ಭವಿಷ್ಯವನ್ನ ನಿರ್ಧರಿಸುತ್ತಿದ್ದಾರೆ. ಪಾಕಿಸ್ತಾನದಲ್ಲಿ EVM ಮತದಾನ ನಡೆಯುತ್ತಿಲ್ಲ. ಬ್ಯಾಲೆಟ್ ಮತದಾನದಲ್ಲಿ ನಾಗರಿಕರು ತಮ್ಮ ಚಲಾಯಿಸುತ್ತಿದ್ದಾರೆ.
 
ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಗೆ ಒಟ್ಟು 336 ಸದಸ್ಯರ ಆಯ್ಕೆ ನಡೆಯಲಿದೆ. ಅದರಲ್ಲಿ 266 ಕ್ಷೇತ್ರಕ್ಕೆ ಇಂದು ಮತದಾನ ನಡೆಯುತ್ತಿದ್ರೆ 70 ಸ್ಥಾನಗಳು ಮೀಸಲು ಸ್ಥಾನಗಳಾಗಿವೆ. 70ರಲ್ಲಿ 60 ಸ್ಥಾನಗಳು ಮಹಿಳೆಯರಿಗೂ ಹಾಗೂ 10 ಸ್ಥಾನ ಮುಸ್ಲಿಮೇತರರಿಗೆ ಮೀಸಲಿದೆ. 336 ಅಸೆಂಬ್ಲಿ ಸ್ಥಾನಗಳಲ್ಲಿ ಸರ್ಕಾರ ರಚಿಸಲು 169 ಸದಸ್ಯರ ಬೆಂಬಲದ ಅಗತ್ಯವಿದೆ. ಇಂದು ತಡರಾತ್ರಿಯ ಹೊತ್ತಿಗೆ ಅನಧಿಕೃತವಾದ ಫಲಿತಾಂಶ ಹೊರ ಬೀಳಲಿದ್ದು, ಫೆಬ್ರವರಿ 22ರಂದು ಅಧಿಕೃತ ಚುನಾವಣಾ ಫಲಿತಾಂಶ ಹೊರಬೀಳುತ್ತಿದೆ.
Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments