#Exclusive NewsTop Newsಸುದ್ದಿ

ಮೇಲಾಧಿಕಾರಿಗಳು ಕಿರುಕುಳ ಆರೋಪ.? ತಾಲೂಕು ದಂಡಾಧಿಕಾರಿ ಕಚೇರಿಯಲ್ಲೇ ನೇಣಿಗೆ ಶರಣು..!

ನೇಣಿಗೆ ಕೊರಳೊಡ್ಡಿದ್ದ ಎಸ್​​ಡಿಎ ಸಿಬ್ಬಂದಿ..!?

ತಾಲೂಕು ದಂಡಾಧಿಕಾರಿಗಳ ಕಚೇರಿಯಲ್ಲಿ ಎಸ್​​ಡಿಎ ರುದ್ರಣ್ಣ ಯಡವಣ್ಣವರ ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗ್ಗೆ ಕಚೇರಿ ಬಾಗಿಲು ತಗೆದಾಗ ಘಟನೆ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನು ತಿಳಿದು ಬಂದಿಲ್ಲ ಖಡೇಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ..!

ವಿಚಾರ ಗೊತ್ತಾದ ಕೂಡಲೆ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೆಟಿ ಕೊಟ್ಟು ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ವಿಷಯ ಗೊತ್ತಗುತ್ತಿದ್ದಂತೆ, ಮೃತ ರುದ್ರಣ್ಣ ಕುಟಂಬಸ್ಥರು, ಸ್ಥಳಕ್ಕೆ ಬಂದಿದ್ದಾರೆ ಈ ವೇಳೆ. ನೇಣಿಗೆ ಶರಣಾಗಿರುವ ಪತಿಯನ್ನು ಕಂಡು ಮೃತ ರುದ್ರಣ್ಣ ಅವರ ಪತ್ನಿ ಕೆಲ ಕಾಲ ಮೂರ್ಛೆ ಹೋಗಿದ್ದಾರೆ. ಅಲ್ದೆ ಘಟನಾ ಸ್ಥಳದಲ್ಲಿ ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು..

ಎಸ್​​ಡಿಎ ಸಿಬ್ಬಂದಿಯೊಬ್ಬರು ತಹಶೀಲ್ದಾರ್ ಅವರ ಕಚೇರಿಯಲ್ಲೇ ನೇಣಿಗೆ ಶರಣಾಗಿರುವ ಘಟನೆ, ಬೆಳಗಾವಿ ತಹಶೀಲ್ದಾರ್ ಕಚೇರಿಯ ಬೆಳಕಿಗೆ ಬಂದಿದೆ.. ತಹಶೀಲ್ದಾರ್ ಬಸವರಾಜ್ ನಾಗರಾಳ ಚೆಂಬರನಲ್ಲಿಯೇ, ಸಿಬ್ಬಂದಿ ನೇಣು ಬಿಗಿದುಕೊಂಡು ಆತ್ಮ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಇನ್ನು ನಿನ್ನೆಯಷ್ಟೇ ಎಸ್​​ಡಿಎ ಮೃತ ರುದ್ರಣ್ಣ ಅವರು ತಹಶೀಲ್ದಾರ್ ಕಚೇರಿಯಿಂದ ಸವದತ್ತಿಯ ಯಲ್ಲಮ್ಮ ದೇವಿಯ ಆಡಳಿತ ಟ್ರಸ್ಟ್​ಗೆ ವರ್ಗವಾಣೆಗೊಂಡಿದ್ದರು ಎನ್ನಲಾಗುತ್ತಿದೆ..

ಮೇಲಾಧಿಕಾರಿಗಳು ಕಿರುಕುಳ ಆರೋಪ.?

ಎಸ್​​ಡಿಎ ಸಿಬ್ಬಂದಿಯೊಬ್ಬರು ತಹಶೀಲ್ದಾರ್ ಅವರ ಕಚೇರಿಯಲ್ಲೇ ನೇಣಿಗೆ ಶರಣಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಇನ್ನು ಮೆಲಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಸಾವಿಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಪೊಲೀಸರ ತನಿಖೆಯಿಂದಷ್ಟೇ ದಂಡಾಧಿಕಾರಿ ಕಚೇರಿಯಲ್ಲಿ ನೇಣಿಗೆ ಶರಣಾಗಿರುವ ರುದ್ರಣ್ಣ ಅವರ ಸಾವಿನ ಹಿಂದನ ಅಸಲಿಯತ್ತು ಬೆಳಕಿಗೆ ಬರಬೇಕಾಗಿದೆ. ಸದ್ಯ ಪೊಲೀಸರು ಕಾನೂನು ಪ್ರಕ್ರಿಯೇಗಳನ್ನು ಮಾಡಲು ಮುಂದಾಗಿದ್ದು, ಇನ್ನು ಈ ಪ್ರಕರಣ ಸಂಬಂಧ ಮೃತರ ವಾಟ್ಸಪ್ ಚಾಟ್ ಸ್ಕ್ರೀನ್​ ಶೇರ್ ಹರಿದಾಡ್ತಿದ್ದು, ಅದ್ರಲ್ಲಿ ನನ್ನ ಸಾವಿಗೆ ತಹಶೀಲ್ದಾರ್ ಹಾಗೂ ಸಚಿವರೊಬ್ಬರ ಪಿಎ ಸೋಮು ಎಂಬುವವರೆ ಕಾರಣ ಎಂದು ಬರೆದುಕೊಳ್ಳಲಾಗ್ತಿದೆ ಎಂದು ಹೇಳಲಾಗ್ತಿದೆ..

ತನಿಖಾಕಾರಿಗಳು ಹೇಳಿದ್ದೇನೆ..?

ಘಟನಾ ಸ್ಥಳವನ್ನು ನಾವು ಪರಿಶೀಲನೆ ಮಾಡಿಲ್ಲ, ಸಿಸಿಟಿವಿ ಪರಿಶೀಲನೆ ಮಾಡಲಾಗುತ್ತದೆ. ವೇಲ್ ನಿಂದ ಪ್ಯಾನ್​ಗೆ ನೇಣುಬಿಗಿದುಕೊಂಡಿರುವುದು ಗೊತ್ತಾಗಿದೆ. ಈ ಬಗ್ಗೆ ಸಂಪೂರ್ಣ ಪರಿಶೀಲನೆ ಮಾಡಲಾಗುತ್ತದೆ. ಸದ್ಯ ಪ್ರಕರಣ ಸಂಬಂಧ ಪ್ರಾರ್ಥಮಿಕ ತನಿಖೆ ಕೈಗೋಳ್ಳಲಾಗಿದೆ. ಈ ವರೆಗೆ ನಮಗೆ ಯಾವುದೇ ಡೆತ್ ನೋಟ್​ ಇತ್ಯಾದಿಗಳು ಲಭ್ಯವಾಗಿಲ್ಲ, ಹೆಚ್ಚಿನ ರೀತಿಯಲ್ಲಿ ತನಿಖೆಗೆ ಮುಂದಾಗಿದ್ದೇವೆ ಬೆಳಗಾವಿ ಡಿಸಿಪಿ ರೋಹನ್ ಜಗದೀಶ್​ ಘಟನಾ ಸ್ಥಳಕ್ಕೆ ಭೇಟಿ ನೀಡಿ ಹೇಳಿಕೆ..

Comments (0)

Your email address will not be published. Required fields are marked *

Back to top button