ತುಮಕೂರು : ಮೃತಪಟ್ಟ ವ್ಯಕ್ತಿ ಹೆಸರಲ್ಲಿ ವಯಸ್ಸಿನ ದೃಢೀಕರಣ ಪತ್ರ ನೀಡಿದ ಇಬ್ಬರು ವೈದ್ಯರ ಅಮಾನತಾಗಿರುವ ಘಟನೆ ತುಮಕೂರು ಜಿಲ್ಲೆ, ಮಧುಗಿರಿ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ.
ಡಾ.ಮಹೇಶ್ ಸಿಂಗ್, ಡಾ.ಪುರುಷೋತ್ತಮ್ ಅಮಾನತಾದ ವೈದ್ಯರಾಗಿದ್ದಾರೆ. 2022ರ ಆಗಸ್ಟ್-ಸೆಪ್ಟಂಬರ್ ತಿಂಗಳಲ್ಲಿ ಮೃತ ಪಟ್ಟಿರೊ ವ್ಯಕ್ತಿ ಹೆಸರಿಗೆ ವಯಸ್ಸಿನ ದೃಢೀಕರಣ ಪತ್ರವನ್ನು ವೈದ್ಯರು ನೀಡಿದ್ದರು. ಪ್ರಕರಣವನ್ನ ಬಯಲಿಗೆಳೆದು, ಪೊಲೀಸ್ ಠಾಣೆ ಮತ್ತು ಆರೋಗ್ಯ ಇಲಾಖೆ ಆಯುಕ್ತರಿಗೆ ಆರ್ ಟಿಐ ಕಾರ್ಯಕರ್ತರು ದೂರು ನೀಡಿದ್ದರು. ಆರೋಗ್ಯ ಇಲಾಖೆಯ ಮುಖ್ಯ ಜಾಗೃತ ಅಧಿಕಾರಿಗಳ ತನಿಖೆಯಲ್ಲಿ ಇಬ್ಬರು ವೈದ್ಯರು ತಪ್ಪಿತಸ್ಥರು ಎಂದು ದೃಢಪಡಿಸಲಾಗಿದೆ. ಇಲಾಖಾ ತನಿಖೆ ಬಾಕಿ ಇರಿಸಿ ಆರೋಗ್ಯ ಇಲಾಖೆ ಇಬ್ಬರನ್ನೂ ಸಸ್ಪೆಂಡ್ ಮಾಡಿದೆ.
ಸದ್ಯ ಹಾವೇರಿ ಜಿಲ್ಲೆಯ ಸವಣೂರಿಗೆ ಡಾ.ಮಹೇಶ್ ಸಿಂಗ್, ಕೋಲಾರ ಜಿಲ್ಲೆಯ ಕೆ.ಜಿ.ಎಫ್ ಗೆ ಡಾ.ಪುರುಷೋತ್ತಮ್ನನ್ನು ವರ್ಗಾವಣೆ ಮಾಡಲಾಗಿದೆ. ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.