Tumakuru: ರಾಜ್ಯದಲ್ಲಿ ಈ ಬಾರಿ ಜನ ಮೆಚ್ಚಿದ ನಾಯಕರ ಸ್ಥಾನದಲ್ಲಿ ಸಿಎಂ ಸಿದ್ದರಾಮಯ್ಯರಿಗೆ ಮೊದಲ ಸ್ಥಾನ ನೀಡಲಾಗಿತ್ತು. ಅದಕ್ಕೆ ತಕ್ಕನಾಗಿ ಸಿಎಂ ಕೂಡ ರಾಜ್ಯದ ಜನರಿಗೆ ಸಹಾಯವಾಗುತ್ತವಂತೆ ಒಂದಿಷ್ಟು ಯೋಜನೆಯನ್ನು ಕೂಡ ನೀಡಿದ್ದಾರೆ.
ಅದರಲ್ಲಿ ಇಂದಿರಾ ಕ್ಯಾಂಟೀನ್ ಯೋಜನೆ ನೀಡಲಾಗಿದೆ. ಬಡವರ ಹಸಿವು ನೀಗಿಸಲೆಂದು ಈ ಯೋಜನೆ ಜಾರಿ ಗೊಳಿಸಲಾಗಿತ್ತು. ಸರ್ಕಾರ ಹಲವು ಯೋಜನೆಗಳನ್ನು ನೀಡಿದೆ ಆದರೆ ಅದರ ಉಸ್ತುವಾರಿ ಅಥವಾ ಮಂತ್ರಿಗಳಿಗೆ ಆ ಸಮಸ್ಯೆ ಯಾರಿಗೂ ಬೇಡವಾಗಿದೆ.
ತುಮಕೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇಂದಿರಾ ಕ್ಯಾಂಟೀನ್ ಇದ್ದು ಇಲ್ಲದಂತಾಗಿದೆ. ಕೆಲವು ಕಡೆ ಕ್ಯಾಂಟಿನ್ ಗೆ ಬರುವ ಅನುದಾನವನ್ನು ಅಧಿಕಾರಿಗಳ ಹೊಟ್ಟೆ ಪಾಲಾಗಿದೆ. ಇನ್ನೂ ಮುಂದುವರಿದು ಕಡೆಗಳಲ್ಲಿ ಇಂದಿರಾ ಕ್ಯಾಂಟೀನ್ ದನದ ಕೊಟ್ಟಿಗೆಗಿಂತ ಕಡೆಯಾಗಿ ನಿಂತಿದೆ. ಈ ದುಸ್ಥಿಯನ್ನು ಕಂಡು ವಿರೋಧ ಪಕ್ಷದವರು ತಮ್ಮ ಪ್ರಚಾರದ ಲಾಭಾಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ.