ತಮಿಳುನಾಡು : ತಮಿಳುನಾಡು- ಮಿಚಾಂಗ್ ಚಂಡಮಾರುತ ಎಫೆಕ್ಟ್ ನಿಂದ ತತ್ತರಿಸಿದ ತಮಿಳುನಾಡಿನಲ್ಲಿ ಎನ್ ಡಿ ಆರ್ ಎಫ್ ತಂಡ ಜನತೆಯ ನೆರವಿಗೆ ಧಾವಿಸಿದೆ. ಕಾಂಚಿಪುರಂ ಜಿಲ್ಲೆಯ ವರಜರಾಜಪುರಂ ನಲ್ಲಿ ಎನ್ ಡಿ ಆರ್ ಎಫ್ ಕಾರ್ಯಾಚರಣೆ ನಡೆಯುತ್ತಿದೆ.

ಮಿಚಾಂಗ್ ಚಂಡಮಾರುತದಿಂದಾಗಿ ನೆರೆ ಪ್ರವಾಹಕ್ಕೆ ಸಿಲುಕಿರುವ ಚೆನ್ನೈನಲ್ಲಿ ಪರಿಹಾರ ಕಾರ್ಯಗಳಲ್ಲಿ ಸ್ವಯಂಪ್ರೇರಿತವಾಗಿ ಭಾಗವಹಿಸುವ ಎನ್ಜಿಒ, ಸ್ವಯಂಸೇವಕರನ್ನು ಸಂಘಟಿಸಲು ಸಹಾಯ ಕೇಂದ್ರವನ್ನು ತಮಿಳುನಾಡು ಸರ್ಕಾರ ಸ್ಥಾಪಿಸಿದೆ.ಮಳೆಯಿಂದಾಗುತ್ತಿರುವ ರಕ್ಷಣಾ ಮತ್ತು ಪರಿಹಾರ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಇಚ್ಛಿಸುವ ಸರ್ಕಾರೇತರ ಸಂಸ್ಥೆಗಳು ಮತ್ತು ಸ್ವಯಂಸೇವಕರನ್ನು ಸಮನ್ವಗೊಳಿಸಲು ತಮಿಳುನಾಡು ಸರ್ಕಾರವು ಎಜಿಲಾಗಮ್ನಲ್ಲಿರುವ ರಾಜ್ಯ ವಿಪತ್ತು ನಿರ್ವಹಣಾ ನಿಯಂತ್ರಣ ಕೊಠಡಿಯಲ್ಲಿ ವಿಶೇಷ ಸಹಾಯ ಕೇಂದ್ರವನ್ನು ಸ್ಥಾಪಿಸಿದೆ.
ವ್ಯಕ್ತಿಗಳು ಸ್ವಯಂಸೇವಕರ ತಂಡಗಳು ಸಂಸ್ಥೆಗಳೂ ತಮ್ಮ ವಿವರಗಳನ್ನು ಹೆಲ್ಪ್ ಡೆಸ್ಕ್ನಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ಮುಖ್ಯಮಂತ್ರಿ ಎಂ. ಕೆಸ್ಟಾಲಿನ್ ಮನವಿ ಮಾಡಿದ್ದಾರೆ. 98 ಪುರುಷರು, 143 ಮಹಿಳೆಯರು, 35 ಮಕ್ಕಳು 23 ಸಾಕು ಪ್ರಾಣಿಗಳು ಸೇರಿದಂತೆ 316 ಜನರ ರಕ್ಷಣೆ ಮಾಡಿದೆ. ತಮಿಳುನಾಡಿನಾದ್ಯಾಂತ ವಿಚಾಂಗ್ ಚಂಡಮಾರುತ ಅಬ್ಬರಿಸಿದ್ದು ಜನರ ಪರಿಸ್ಥಿತಿ ಅಲ್ಲೋಲ ಕಲ್ಲೋಲ ಮಾಡಿದೆ.


