ಜಿಲ್ಲೆರಾಜ್ಯ

ಮಾನವ ರಹಿತ ವೈಮಾನಿಕ ವಾಹನ : ಯುಎವಿ ಪ್ರಯೋಗಾರ್ಥ ಹಾರಾಟ ಯಶಸ್ವಿ

ಚಿತ್ರದುರ್ಗ : ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುವ, ಅತಿ ವೇಗದ, ಮಾನವ ರಹಿತ ವೈಮಾನಿಕ ವಾಹನ (ಯುಎವಿ ) ರಾಡಾರ್​​ ಸಂಪರ್ಕಕ್ಕೆ ಸಿಗದಂತೆ ಹಾರಾಟ ನಡೆಸುವ ಪ್ರಯೋಗ ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್​​ಡಿಒ)ವಾಯುನೆಲೆಯಲ್ಲಿ ಶುಕ್ರವಾರ ಯಶಸ್ವಿಯಾಯಿತು.

ಬಾಲರಹಿತ (ಟೇಲ್​ಲೆಸ್​​ ಕಾನ್ಫಿಗರೇಷನ್​ ) ಸಂರಚನೆ ಹೊಂದಿದ ಯುಎವಿಯು ರಹಸ್ಯವಾಗಿ ಕಾರ್ಯನಿರ್ವಹಿಸುವ ತಂತ್ರಜ್ಞಾನ ಹೊಂದಿದ ಪ್ರಮುಖ ರಾಷ್ಟ್ರಗಳ ಸಾಲಿಗೆ ಭಾರತ ಸೇರಿದಂತಾಗಿದೆ. ರಕ್ಷಣಾ ತಂತ್ರಜ್ಞಾನದಲ್ಲಿ ಸ್ವಾವಲಂಬನೆ ಸಾಧಿಸುತ್ತಿರುವ ದೇಶವು ವೈಮಾನಿಕ ಕ್ಷೇತ್ರದ ತಂತ್ರಜ್ಞಾನದ ಪರಿಪಕ್ವತೆಗೆ ಇದು ಸಾಕ್ಷಿಯಾಗಿದೆ ಎಂದು ರಕ್ಷಣಾ ಸಚಿವಾಲಯ ಮೆಚ್ಚುಗೆ ವ್ಯಕ್ಷಪಡಿಸಿದೆ.

Comments (0)

Your email address will not be published. Required fields are marked *

Back to top button