ಜಿಲ್ಲೆರಾಜಕೀಯರಾಜ್ಯ

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹುಟ್ಟುಹಬ್ಬದ ಶುಭಕೋರಿದ ಸಿಎಂ

ಹುಬ್ಬಳ್ಳಿ : ಹುಬ್ಬಳ್ಳಿಯ ಮಧುರಾ ಎಸ್ಟೇಟ್​​​ನಲ್ಲಿರುವ ಶೆಟ್ಟರ್​​ ನಿವಾಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ. ಶೆಟ್ಟರ್ ನಿವಾಸದಲ್ಲಿ ಸಿಎಂಗೆ ಭರ್ಜರಿಯಾಗಿ ಸ್ವಾಗತಿಸಲಾಯಿತು. ಮಾಜಿ ಸಿಎಂ ಜಗದೀಶ್ ಶೆಟ್ಟರ್ 68ನೇ ಹುಟ್ಟುಹಬ್ಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಭಾಶಯ ಕೋರಿದರು.

ಶೆಟ್ಟರ್ ಕುಟುಂಬದೊಂದಿಗೆ ಸಿಎಂ ಉಪಹಾರ ಸೇವಿಸಿದರು. ಶೆಟ್ಟರ್​ ಹುಟ್ಟುಹಬ್ಬದ ನಿಮಿತ್ತ ಶೆಟ್ಟರ್ ನಿವಾಸದ ಎದುರು‌ ಸನ್ಮಾನ ಸಮಾರಂಭ ಆಯೋಜಿಸಲಾಗಿತ್ತು. ಶೆಟ್ಟರ್​ ಬಳಿ ಶಾಲು, ಹಾರ ಸ್ವೀಕರಿಸಲು ಸಿಎಂ ಸಿದ್ದರಾಮಯ್ಯ ನಿರಾಕರಿಸಿದ್ದು, ಶೋಕಾಚರಣೆ ಇದೆ ಶೆಟ್ಟರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Comments (0)

Your email address will not be published. Required fields are marked *

Back to top button