ಹುಬ್ಬಳ್ಳಿ : ಬೆಳಗಾವಿ ಮಹಿಳೆ ಮೇಲಿನ ಹಲ್ಲೆ ಪ್ರಕರಣದಲ್ಲಿ ಜೆಪಿ ನಡ್ಡಾ ಅವರು ಮತ್ತು ಬಿಜೆಪಿ ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಈಗಾಗಲೇ ಏನೇನು ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಂಡಿದ್ದೆವೆ. ಗೃಹ ಸಚಿವರು ಸಂತ್ರಸ್ತೆ ಭೇಟಿ ಮಾಡಿ ಸಾಂತ್ವನ ಹೇಳಿ ಪರಿಹಾರ ನೀಡಿ ಬಂದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇನ್ನೂ ಉತ್ತರ ಪ್ರದೇಶದಲ್ಲಿ ಬಿಜೆಪಿ ಶಾಸಕನಿಗೆ ಜೈಲಾಗಿದೆ. ಒಂಬತ್ತು ವರ್ಷದ ಹುಡುಗಿಯನ್ನು ಅತ್ಯಾಚಾರ ಮಾಡಿದ್ದಾನೆ ಇದರ ಬಗ್ಗೆ ಮಾತನಾಡಲಿ ಇದನ್ನು ನಾನು ಖಂಡಿಸುತ್ತೀನಿ ಯಾರು ತಪ್ಪು ಮಾಡಿದ್ದಾರೆ ಅವರಿಗೆ ತೀವ್ರ ಶಿಕ್ಷೆಯಾಗಬೇಕು. ಇದು ನಾಗರಿಕ ಸಮಾಜ ತಲೆ ತಗ್ಗಿಸುವ ವಿಚಾರ ಪ್ರಹ್ಲಾದ್ ಜೋಶಿ ಅವರು ಉತ್ತರ ಪ್ರದೇಶ ಶಾಸಕನ ವಿಚಾರವಾಗಿ ಏನು ಹೇಳತ್ತಾರೆ..? ಎಂದು ಪ್ರಶ್ನಿಸಿದರು.
ಇನ್ನೂ ಟಿಪ್ಪು ವಿಚಾರವಾಗಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಅದು ಶಾಸಕ ಅಬ್ಬಯ್ಯ ಪ್ರಸಾದ್ ಅಭಿಪ್ರಾಯ. ನಾವು ಸರ್ಕಾರ ತೀರ್ಮಾನ ಮಾಡಿಲ್ಲ. ಆದರೆ ಅವರ ಅಭಿಪ್ರಾಯ ಹೇಳಿದ್ದಾರೆ ಅಷ್ಟೇ. ಭದ್ರತಾ ಲೋಪದಲ್ಲಿ ರಾಜಕೀಯ ಏನು..? ಭದ್ರತಾ ಲೋಪ ಆಗಿದೆ ಇದನ್ನು ಹೇಳಿದ್ರೆ ಹೇಗೆ ರಾಜಕೀಯ ಆಗುತ್ತೆ ಎಂದು ಹುಬ್ಬಳ್ಳಿಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಲಿಂಗಾಯತ ಶಾಸಕ ಪತ್ರದ ವಿಚಾರ : ಜಾತಿ ಗಣಿತಿ ವರದಿ ಇನ್ನೂ ಬಂದಿಲ್ಲ. ವರದಿಯಲ್ಲಿ ಏನು ಇದೆ ಅಂತ ಯಾರಿಗಾದರೂ ಗೊತ್ತಾ..? ನನಗೂ ಗೊತ್ತಿಲ್ಲ, ಅವರಿಗೂ ಗೊತ್ತಿಲ್ಲ ಅವರು ಊಹೆ ಮಾಡಿ ಹೇಳುತ್ತಿದ್ದಾರೆ, ನೋಡೋಣ.. ಎಂದು ತಿಳಿಸಿದರು.


