ಬೆಳ್ಳಂಬೆಳಗ್ಗೆ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದಾರೆ. 13 ಅಧಿಕಾರಿಗಳಿಗೆ ಸೇರಿದ 63 ಕಡೆ ರೇಡ್ ಮಾಡಲಾಗಿದೆ. ಬೆಂಗಳೂರಿನಲ್ಲಿ ಮೂರು ಕಡೆ ದಾಳಿ ನಡೆಸಿ ಸುಮಾರು 200 ಹೆಚ್ಚು ಅಧಿಕಾರಿ ಸಿಬ್ಬಂದಿಯಿಂದ ದಾಳಿ ಮಾಡಿ ಪರಿಶೀಲನೆ ನಡೆಸಲಾಗಿದೆ.

ಸುಧಾಕರ್ ರೆಡ್ಡಿ, EE (ಎಲೆಕ್ಟ್ರಿಕ್) ಬೆಸ್ಕಾಂ, ಕೆಆರ್ ಸರ್ಕಲ್, ವಿಜಿಲೆನ್ಸ್, ಬೆಂಗಳೂರು, ಚನ್ನಕೇಶವ, EE (ಎಲೆಕ್ಟ್ರಿಕ್) ಬೆಸ್ಕಾಂ ಹಾಗೂ ಎಚ್.ಎಸ್.ಕೃಷ್ಣಮೂರ್ತಿ, ಕಣ್ಮಿಣಿಕೆ ಹಾಲು ಉತ್ಪಾದಕರ ಸಹಕಾರ ಸಂಘ, ಕುಂಬಳಗೋಡು. ಎಚ್.ಡಿ.ನಾರಾಯಣ ಸ್ವಾಮಿ, ವಿಶ್ರಾಂತ ಉಪಕುಲಪತಿ, ಪಶು ಮತ್ತು ಮೀನುಗಾರಿಕೆ ವಿವಿ, ಬೀದರ್. ಸುನೀಲ್ ಕುಮಾರ್, ಸಹಾಯಕ, ಹಣಕಾಸು ನಿಯಂತ್ರಕರು, ಪಶು ಮತ್ತು ಮೀನುಗಾರಿಕೆ ವಿವಿ, ಬೀದರ್. ಡಾ.ಪ್ರಭುಲಿಂಗ್, DHO ಯಾದಗಿರಿಯಲ್ಲಿ ದಾಳಿ ನಡೆಸಿ ಭಷ್ಟ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ.


