
ಬೆಂಗಳೂರು: ಅಮೆರಿಕನ್ ಶೈಲಿಯ ಆಹಾರ ಮತ್ತು ರಾಕ್ ಸಂಗೀತಕ್ಕೆ ಹೆಸರಾಗಿದ್ದ ‘ಹಾರ್ಡ್ ರಾಕ್ ಕೆಫೆ’ ಭಾರತದಲ್ಲಿ ತನ್ನ ಕಾರ್ಯಾಚರಣೆಗಳನ್ನು ಕೊನೆಗೊಳಿಸಿದೆ. JSM ಕಾರ್ಪೊರೇಷನ್ ಪ್ರೈವೇಟ್ ಲಿಮಿಟೆಡ್ ಜೊತೆಗೆ ಇದ್ದ ಒಪ್ಪಂದ ರದ್ದಾದ ಹಿನ್ನೆಲೆಯಲ್ಲಿ, ಬೆಂಗಳೂರು ಸೇರಿದಂತೆ ದೇಶದ 10 ಪ್ರಮುಖ ನಗರಗಳ ಕೆಫೆಗಳು ಮುಚ್ಚಲಿವೆ.
ಬಾಲ್ಡಿಂಗ್, ಐಕಾನಿಕ್ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಾರ್ಡ್ ರಾಕ್ ಕೆಫೆಗಳಲ್ಲೂ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ವೈಟ್ಫೀಲ್ಡ್, ಸೇಂಟ್ ಮಾರ್ಕ್ಸ್ ರೋಡ್ ಮತ್ತು ಚಂಡೀಗಢ, ಚೆನ್ನೈ, ಹೈದರಾಬಾದ್ (ಹೈಟೆಕ್ ಸಿಟಿ ಸೇರಿದಂತೆ), ಕೋಲ್ಕತ್ತಾ, ನವದೆಹಲಿ, ಪುಣೆ ಸ್ಥಳಗಳಲ್ಲಿ ಸೇವೆ ಕೊನೆಗೊಳ್ಳಲಿದೆ. ಆದರೆ ಗೋವಾದ ಹಾರ್ಡ್ ರಾಕ್ ಹೋಟೆಲ್ ಕಾರ್ಯನಿರ್ವಹಿಸುತ್ತಲೇ ಇದೆ.
1971ರಲ್ಲಿ ಲಂಡನಿನಲ್ಲಿ ಐಸಾಕ್ ಟಿಗ್ರೆಟ್ ಮತ್ತು ಪೀಟರ್ ಮಾರ್ಟನ್ ಅವರು ಆರಂಭಿಸಿದ ಹಾರ್ಡ್ ರಾಕ್ ಕೆಫೆ, ಇಂದು 70ಕ್ಕೂ ಹೆಚ್ಚು ದೇಶಗಳಲ್ಲಿ ಹೋಟೆಲ್, ಕ್ಯಾಸಿನೋ ಮತ್ತು ಮ್ಯೂಸಿಯಂಗಳನ್ನು ಹೊಂದಿದೆ.




