Thursday, January 29, 2026
16.9 C
Bengaluru
Google search engine
LIVE
ಮನೆUncategorizedಬೇರೆ ಪರಿಹಾರ ವಾರದೊಳಗೆ ರೈತರ ಖಾತೆಗೆ ಜಮಾ: ಕೃಷ್ಣ ಭೈರೇಗೌಡ

ಬೇರೆ ಪರಿಹಾರ ವಾರದೊಳಗೆ ರೈತರ ಖಾತೆಗೆ ಜಮಾ: ಕೃಷ್ಣ ಭೈರೇಗೌಡ

ರಾಯಚೂರು: ಕೇಂದ್ರ ಸರ್ಕಾರದಿಂದ ಬೇರೆ ಪರಿಹಾರ ಬಿಡುಗಡೆ ತಂಡವಾಗಿರುವುದರಿಂದ ರಾಜ್ಯ ಸರ್ಕಾರದಿಂದ ಮೊದಲ ಕಂತಿನ ಪರಿಹಾರ ನೀಡಲಾಗುತ್ತಿದ್ದು, ಒಂದು ವಾರದೊಳಗೆ ರೈತರ ಖಾತೆಗೆ ಹಣ ಜಮಾ ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ರಾಯಚೂರು ಜಿಲ್ಲೆಯಲ್ಲಿ ಒಂದೂವರೆ ಲಕ್ಷ ರೈತರು ವ್ಯಾಲಿಡೇಷನ್ ಪೆಂಡಿಂಗ್ ಇದೆ. ಇದನ್ನು ತಹಶೀಲ್ದಾರರು ತ್ವರಿತವಾಗಿ ಮಾಡಿದರೆ ರೈತರಿಗೆ ಬೇರೆ ಪರಿಹಾರ ತಲುಪಿಸಲು ಅನುಕೂಲ ಆಗಲಿದೆ. ಕೆಲವು ರೈತರ ವ್ಯಾಲಿಡೇಷನ್ ಪೆಂಡಿಂಗ್ ಇದ್ದರೂ ಇನ್ನುಳಿದ ರೈತರಿಗೂ ಪರಿಹಾರ ನೀಡಲು ತೊಂದರೆ ಆಗಲಿದೆ ಎಂದರು.

ಬೇರೆ ಜಿಲ್ಲೆಗಳಲ್ಲಿ ರಜಾ ದಿನಗಳಲ್ಲಿ ಕೂಡ ವ್ಯಾಲಿಡೇಷನ್ ಕೆಲಸ ಮಾಡಲಾಗಿದೆ. ಆದರೆ ರಾಯಚೂರು ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ಜಿಲ್ಲಾಧಿಕಾರಿ ಹಾಗೂ ಸಹಾಯಕ ಆಯುಕ್ತರು ಒಳಗೊಂಡಂತೆ ಎಲ್ಲಾ ಅಧಿಕಾರಿಗಳು ಜವಾಬ್ದಾರಿಯುತವಾಗಿ ಹಗಲು ರಾತ್ರಿ ಕೆಲಸ ಮಾಡಿ ಎರಡು ದಿನಗಳಲ್ಲಿ ಮುಗಿಸಬೇಕು ಎಂದು ತಿಳಿಸಿದರು.

ಎಲ್ಲೆಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಲಿದೆ ಎಂಬುದನ್ನು ಮನಗಂಡು ಖಾಸಗಿ ಬೋರವೆಲ್ ಮೂಲಕ ನೀರು ಸರಬರಾಜು ಮಾಡಲು ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು. ಶಾಸಕ ಬಸನಗೌಡ ದದ್ದಲ ಮಾತನಾಡಿ, ಬೆಳೆ ಬೆಳೆಯುವ ಮುಂಚೆಯೇ ಖಾಸಗಿ ಬೋರವೆಲ್ ಮಾಲೀಕರಿಗೆ ಇಂತಿಷ್ಟು ದಿನಕ್ಕೆ ಪೇಮೆಂಟ್ ಮಾಡಲಾಗುತ್ತದೆ ಎಂದು ಭರವಸೆ ನೀಡಿದರೆ ಅವರು ಬೋರವೆಲ್ ಬಾಡಿಗೆ ನೀಡುತ್ತಾರೆ. ಬೆಳೆ ಬೆಳೆದುಕೊಂಡ ಬಳಿಕ ನೀರು ಪಡೆದುಕೊಳ್ಳಲು ಹೋದರೆ ಸಮಸ್ಯೆ ಆಗಲಿದೆ ಎಂದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments