Freedom TV

ಬೆಳಗಾವಿ ಅಧಿವೇಶನ ರೈತರು, ಬಡವರಿಗೆ ಅನೂಕೂಲವಾಗಲಿ : ಬಿ.ವೈ ವಿಜಯೇಂದ್ರ

ಬೆಳಗಾವಿ : ಬೆಳಗಾವಿ ಅಧಿವೇಶನ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮಾತನಾಡಿದ್ದು, ಉತ್ತರ ಕರ್ನಾಟಕದ ಹೆಬ್ಬಾಗಿಲು ಬೆಳಗಾವಿ ಜಿಲ್ಲೆ. ಉತ್ತರ ಕರ್ನಾಟಕದ ಬಡವರಿಗೆ, ರೈತರಿಗೆ ಅನುಕೂಲವಾಗಲಿ ಎನ್ನುವ ನಿಟ್ಟಿನಲ್ಲಿ ಸುವರ್ಣಸೌಧ ಚಿಂತನೆ ಮಾಡಿದ್ದು ಯಡಿಯೂರಪ್ಪನವರು. ಚಳಿಗಾಲದ ಅಧಿವೇಶನ ಈ ಭಾಗದ ರೈತರಿಗೆ ಬಡವರಿಗೆ ಅನೂಕೂಲವಾಗಲಿ. ಉತ್ತರ ಕರ್ನಾಟಕ ಜನತೆ ಬಹಳ ನಿರೀಕ್ಷೆಯಲ್ಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜೆಯೇಂದ್ರ ಹೇಳಿದರು.


ಕಬ್ಬು ಬೆಳೆಗಾರರು, ಪ್ರತಿಯೊಬ್ಬರು ಪರಿಹಾರದ ನಿರೀಕ್ಷೆಯಲ್ಲಿದ್ದಾರೆ. ರಾಜ್ಯ ಸರ್ಕಾರ ಸಿಹಿ ಸುದ್ದಿ ಕೊಡಲಿ. ಹೊಸ ಸರ್ಕಾರ ಸಾಕಷ್ಟು ನಿರೀಕ್ಷೆಗಳದ್ವು. ಆದ್ರೆ ದಿನ ಕಳೆದಂತೆ ಎಲ್ಲ ಹುಸಿಯಾಗಿದೆ. ಅಧೀವೇಶನದ ಮುಖಾಂತರವಾದ್ರೂ ಉತ್ತರ ಕರ್ನಾಟಕದ ಜನತೆಗೆ ಸಿಹಿ ಸುದ್ದಿ ನೀಡಲಿ ಎಂದರು. ಸದನದ ಒಳಗೆ ಬಿಜೆಪಿ ವಿರೋಧ ಪಕ್ಷವಾಗಿ ಕೆಲಸ ಮಾಡಲಿದೆ. ಸಮರ್ಥವಾಗಿ ಜನತೆಯ ನಿರೀಕ್ಷೆಯಂತೆ ಸದನದಲ್ಲಿ ಪ್ರಸ್ತಾಪ ಮಾಡ್ತೇನೆ. ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಗೆಲುವು ವಿಚಾರ. ಕಾರ್ಯಕರ್ತರ ಮುಖದಲ್ಲಿನ ಸಂತೋಷ ನೋಡಿದ್ರೆ ಗೊತ್ತಾಗುತ್ತೆ. ಈಡೀ ದೇಶದಲ್ಲಿ I.N.D.I.A ಒಕ್ಕೂಟ ಬಿಜೆಪಿ ವಿರುದ್ಧ ಬಿಂಬಿಸುವ ಪ್ರಯತ್ನ ಮಾಡಿದ್ರು. ಚುನಾವಣೆಯ ಪಲಿತಾಂಶ ದೊಡ್ಡ ಶಕ್ತಿ ತಂದು ಕೊಟ್ಟಿದೆ. ಕಾಂಗ್ರೆಸ್ ಪಕ್ಷದ ಗೊಳ್ಳು ಭರವಸೆಗಳನ್ನು ಜನರು ನಂಬ್ತಿಲ್ಲ. ಲೋಕಸಬೆ ಚುನಾವಣೆಯನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ. ಬಿಜೆಪಿ ಹಾಗೂ ಜೆಡಿಎಸ್ ಒಂದಾಗಿ ಕಾಂಗ್ರೆಸ್ ಪಕ್ಷವನ್ನು ದೂಳಿಪಟ ಮಾಡಲಿದ್ದೇವೆ.

Comments (0)

Your email address will not be published. Required fields are marked *

Back to top button