ಡೇಂಜರ್ ಮರಗಳ ತೆರವಿಗೆ ಮುಂದಾದ ಬಿಬಿಎಂಪಿ.ಕೆಲ ದಿನಗಳ ಹಿಂದೆ ಒಣಗಿದ ಮರಗಳಿಂದ ಸಾವು ನೋವು ಹೆಚ್ಚಾಗಿದೆ.ಜನರ ಸಾವಿನ ಬಳಿಕ ನಗರದಲ್ಲಿ ಒಣಗಿದ ಮರಗಳಿಗೆ ಕೊಡಲಿ ಹಾಕಿದ ಬಿಬಿಎಂಪಿ.
ಡಿಸಿಎಂ ಡಿಕೆ ಶಿವಕುಮಾರ್ ಸೂಚನೆ ಬೆನ್ನಲ್ಲೆ ತೆರವು ಮಾಡಲಾಗುತ್ತಿದೆ.ಜಯನಗರದ ವ್ಯಾಪ್ತಿಯಲ್ಲಿ ಡೆಡ್ಲಿ ಮರವನ್ನು ತೆರವು ಮಾಡಲಾಗಿದ.ಮರದ ರೆಂಬೆ ಕೊಂಬೆಗಳಿಂದ ನಿರಂತರ ಅವಾಂತರ ಬೆನ್ನಲೆ ಬಿಬಿಎಂಪಿ ಚೀಫ್ ಕಮಿಷನರ್ ತುಷಾರ್ ರಿಂದ ಸಿಟಿ ರೌಂಡ್ಸ್. ಮರಗಳ ಕಟಾವು ವಿಳಂಬದಿಂದಾಗಿ ಸಾರ್ವಜನಿಕರಿಂದ ಸಾಲು ಸಾಲು ದೂರುಗಳು ಬರಲಾರಂಭಿಸಿದ ಕಾರಣ ಮರಗಳನ್ನು ಕಡಿಯುತ್ತಿದ್ದಾರೆ.ಜಯನಗರದ 2ನೇ ಬ್ಲಾಕ್ ನಲ್ಲಿ ಪರಿಶೀಲನೆಗೆ ಮುಂದಾದ ಬಿಬಿಎಂಪಿ ಚೀಫ್ ಕಮಿಷನರ್ ಒಣಗಿದ ಮರಗಳನ್ನು ಸ್ಥಳದಲ್ಲೇ ಕತ್ತರಿಸುವಂತೆ ತುಷಾರ್ ಗಿರಿನಾಥ್ ಸೂಚನೆ ನೀಡಿದ್ದಾರೆ.