ಬೆಂಗಳೂರು- ಹಿಂದಿನ ಬಿಜೆಪಿ ಸರ್ಕಾರ ಬಿಡುಗಡೆ ಮಾಡಿದ್ದ ೧೫ ನೇ ಹಣಕಾಸು ಆಯೋಗದ ೨೦೨೨-೨೩ನೇ ಸಾಲಿನ ೨೯೧ಕೋಟಿ ಅನುದಾನದ ಕ್ರಿಯಾಯೋಜನೆಗಳಿಗೆ ಸರ್ಕಾರ ಅನುಮೋದನೆ ನೀಡಿದೆ.
ಬಿಬಿಎಂಪಿಯಲ್ಲಿ ನೀರು ಸರಭರಾಜು, ನೈರ್ಮಲ್ಯ, ಕೆರೆಗಳ ಪುನರುಜ್ಜೀವನ ಮತ್ತು ಘನತ್ಯಾಜ್ಯ ನಿರ್ವಹಣೆಗೆ ೨೦೨೩ರ ಮೇ ೨೫ ರಂದು ಹಣ ಬಿಡುಗಡೆ ಆಗಿತ್ತು. ಅದರಂತೆ ಸೆಪ್ಷಂಬರ್ ೬ ರಂದು ಬಿಬಿಎಂಪಿ ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಗತ್ಯವಿರುವ ಕಾಮಗಾರಿಗಳಿಗೆ ಕ್ರಿಯಾಯೋಜನೆ ರೂಪಿಸಲಾಗಿತ್ತು.
ಕ್ರಿಯಾಯೋಜನೆಯ ಪ್ರಸ್ತಾªವÀನ್ನ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಡಿ.೧೧ ರಂದು `ಸೂಕ್ಷ್ಮ ಮಟ್ಟದ ಕ್ರಿಯಾಯೋಜನೆ ಕಾಮಗಾರಿಗಳ ಪಟ್ಟಿಗೆ ಸರ್ಕಾರ ಷರತ್ತುಬದ್ಧ ಅನುಮೋದನೆ ನೀಡಿದೆ.

ಅನುಮೋದನೆ ನೀಡಲಾಗಿರುವ ಕ್ರಿಯಾಯೋಜನೆಯ ಕಾಮಗಾರಿಗಳಿಗೆ ತಾಂತ್ರಿಕ ಅನುಮೋದನೆ ಪಡೆದು ೧೦ ಕೋಟಿಗೆ ಕಡಿಮೆ ಇರದಂತೆ ಪ್ಯಾಕೇಜ್ ಮಾಡಿ, ಕೆಟಿಪಿಪಿ ಕಾಯ್ದೆಯಂತೆ ಇ- ಪ್ರೊಕ್ಯೂರ್‌ಮೆಂಟ್ ಟೆಂಡರ್‌ನಲ್ಲಿ ಕರೆಯಬೇಕು.
ಸೂಕ್ಷö್ಮಮಟ್ಟದ ಕ್ರಿಯಾಯೋಜನೆ ಕಾಮಗಾರಿಗಳು ಅನುಷ್ಠಾನದ ಪ್ರಗತಿ ಕುರಿತು ಪರಿಶೀಲನೆ ಮತ್ತು ಮೇಲ್ವೀಚಾರಣೆ ಆನ್‌ಲೈನ್ ತಂತ್ರಾಂಶ ಸಿದ್ಧಪಡಿಸಿ, ತಿಂಗಳುವಾರು ಪ್ರಗತಿಯನ್ನು ಅಪ್‌ಲೋಡ್ ಮಾಡಬೇಕು ಎಂದು ಷರತ್ತು ವಿಧಿಸಲಾಗಿದೆ.
ಒತ್ತುವರಿ ತೆರವಿನ ನಂತರ ಅಭಿವೃದ್ಧಿ : ಕೆರೆಗಳ ಪುನರ್‌ಜ್ಜೀವನ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಆರಂಭಿಸುವ ಮುನ್ನ ಒತ್ತುವರಿಗಳನ್ನ ತೆರವುಗೊಳಿಸಬೇಕೆಂದು ಕ್ರಿಯಾಯೋಜನೆ ಅನುಮತಿ ನೀಡಿರುವ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
ಕೆರೆಗಳ ಗ್ರಾಮ ನಕ್ಷೆ : ಸರ್ವೆ ನಕ್ಷೆಯಂತೆ ಗಡಿರೇಖೆಗಳನ್ನು ಸರಿಯಾಗಿ ಗುರುತಿಸಬೇಕು. ಯಾವುದೇ ಒತ್ತುವರಿಗಳನ್ನ ತೆರವುಗೊಳಿಸಿದ ಮೇಲೆ ಕಾಮಗಾರಿಗಳನ್ನ ಆರಂಭಿಸಬೇಕು ಎಂದು ಷರತ್ತು ವಿಧಿಸಲಾಗಿದೆ.