ರಾಜಕೀಯ

ಬಿಜೆಪಿ ಲೋಕ ಸಮರಕ್ಕೆ 2ನೇ ಲಿಸ್ಟ್ ಯಾವಾಗ ಗೊತ್ತಾ?

ಬೆಂಗಳೂರು : ಕರ್ನಾಟಕದ 18ರಿಂದ 20 ಲೋಕಸಭಾ ಕ್ಷೇತ್ರಗಳನ್ನೂ ಒಳಗೊಂಡಂತೆ ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ಸೋಮವಾರ ಅಥವಾ ಮಂಗಳವಾರ ಪ್ರಕಟಗೊಳ್ಳುವ ನಿರೀಕ್ಷೆಯಿದೆ. ಇವತ್ತು ದೆಹಲಿಯಲ್ಲಿ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ರಾಜ್ಯದ ಅಭ್ಯರ್ಥಿಗಳ ಬಗ್ಗೆ ವಿಸ್ತೃತ ಚರ್ಚೆ ನಡೆದು ಅಂತಿಮಗೊಳಿಸಲಾಗುವುದಾಗಿ ಎಂದು ಹೇಳಲಾಗ್ತಿದೆ. ಎರಡು ದಿನಗಳ ಕಾಲ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ,, ಸಂಸದೀಯ ಮಂಡಳಿ ಸದಸ್ಯರೂ ಆಗಿರುವ ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು ದೆಹಲಿಯಲ್ಲಿ ಪಕ್ಷದ ವರಿಷ್ಠರೊಂದಿಗೆ ಆಯ್ಕೆ ಸಂಬಂಧ ಕಸರತ್ತು ನಡೆಸಲಿದ್ದಾರೆ. ಎರಡನೇ ಪಟ್ಟಿ ಘೋಷಣೆ ಸಿದ್ಧತೆ ನಡೆಸಿರುವ ಬಿಜೆಪಿಯಲ್ಲೂ ಗೊಂದಲ, ಅಸಮಾಧಾನಗಳು ಹತ್ತಾರು. ಮೊದಲ ಲಿಸ್ಟ್​​ನಲ್ಲಿ ಕರ್ನಾಟಕದಿಂದ ಕೇಂದ್ರದಲ್ಲಿ ಮಂತ್ರಿಯಾಗಿರುವವರು ಸೇರಿದಂತೆ 25 ಸಂಸದರಲ್ಲಿ ಯಾರೊಬ್ಬರ ಹೆಸರೂ ಘೋಷಣೆ ಆಗಿರಲಿಲ್ಲ. ಹೀಗಾಗಿ ಎರಡನೇ ಲಿಸ್ಟ್ನಲ್ಲಿ ಕರ್ನಾಟಕದ ಎಂಪಿ ಅಭ್ಯರ್ಥಿಗಳ ಹೆಸರು 2ನೇ ಲಿಸ್ಟ್ನಲ್ಲಿನಲ್ಲಿ ಇದ್ದೇ ಇರುತ್ತೆ ಎನ್ನುವುದು ರಾಜ್ಯದ ಕಮಲ ಕಲಿಗಳ ನಿರೀಕ್ಷೆ. ಹಾಗಿದ್ದರೂ ಒಂದಷ್ಟು ಹಾಲಿಗಳಿಗೆ ಕೈಕೊಟ್ಟು, ಒಂದಿಷ್ಟು ಹೊಸ ಮುಖಗಳಿಗೆ ಮಣೆಹಾಕುವ ನಿರೀಕ್ಷೆ ಇದೆ.

Comments (0)

Your email address will not be published. Required fields are marked *

Back to top button