ಜಿಲ್ಲೆಸುದ್ದಿ

ಬಿಜೆಪಿ ಮುಖಂಡ ಅರುಣ್​ ಕುಮಾರ್​ ಪುತ್ತಿಲಗೆ ಗಡೀಪಾರು ನೋಟಿಸ್…!​​​​

ದಕ್ಷಿಣ ಕನ್ನಡ : ಬಿಜೆಪಿ ನಾಯಕ, ಹಿಂದೂ ಪರ ಮುಖಂಡ ಅರುಣ್​ ಕುಮಾರ್​ ಪುತ್ತಿಲ ತವರು ಜಿಲ್ಲೆಯಿಂದ ಗಡೀಪಾರು ಶಿಕ್ಷೆಗೆ ಒಳಗಾಗುವ ಭೀತಿ ಎದುರಿಸ್ತಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಿಂದ ಕಲಬುರ್ಗಿ ಜಿಲ್ಲೆಯ ಶಹಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಗೆ ಏಕೆ ಗಡೀಪಾರು ಮಾಡಬಾರದು ಕಾರಣ ನೀಡಿ ಎಂದು ಪುತ್ತಿಲಗೆ ನೋಟಿಸ್ ನೀಡಲಾಗಿದೆ.

ಹಿಂಸೆಗೆ ಪ್ರಚೋದನೆ ಮತ್ತು ಇನ್ನಿತರ ಅಪರಾಧ ಕೃತ್ಯಗಳಲ್ಲಿ ಭಾಗಿ ಹಾಗೂ ಭವಿಷ್ಯದಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿ ಆಗಬಹುದಾದ  ಕಾರಣವನ್ನು ಗಡೀಪಾರು ನೋಟಿಸ್​ ನಲ್ಲಿ ನೀಡಲಾಗಿದೆ.

ಜೂನ್ ಆರರಂದು ವಿಚಾರಣೆಗೆ ಬರಬೇಕು.. ಇಲ್ಲವಾದಲ್ಲಿ ಏಕಪಕ್ಷೀಯ ನಿರ್ಣಯ ತೆಗೆದುಕೊಂಡು ತಮ್ಮನ್ನು ಗಡಿಪಾರು ಮಾಡಲಾಗುತ್ತದೆ ಎಂದು ಎಚ್ಚರಿಸಲಾಗಿದೆ.

ಅರುಣ್​ ಕುಮಾರ್​ ಪುತ್ತಿಲ 5 ಪ್ರಮುಖ ಕ್ರಿಮಿನಲ್​ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ. ಸ್ವ ಪಕ್ಷದ ಕಾರ್ಯಕರ್ತೆಗೆ ಲೈಂಗಿಕ ಕಿರುಕುಳ ಪ್ರಕರಣದಲ್ಲೂ ಪುತ್ತಿಲ ಪ್ರಮುಖ ಆರೋಪಿಯಾಗಿದ್ದಾರೆ.

ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ 4 ಕೇಸ್​ ಹಾಗೂ ಕಡಬ ಪೊಲೀಸ್​ ಠಾಣೆಯಲ್ಲಿ 1 ಕೇಸ್​, ಒಟ್ಟು 5 ಪ್ರಕರಣಗಳು ಪುತ್ತಿಲ ವಿರುದ್ದ ದಾಖಲಾಗಿವೆ.

ಐಪಿಸಿ ಕಲಂ – 506, 304 ಎ, 201, 307, 504, 107, 447,447, 148, 144, 141, 323, 279, 352, 34, 149 ಒಟ್ಟು 16 ಸೆಕ್ಷನ್​​ಗಳ ಅಡಿಯಲ್ಲಿ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.2

023ರ ವಿಧಾನಸಭಾ ಚುನಾವಣೆಯಲ್ಲಿ ಬಂಡಾಯವಾಗಿ ನಿಂತು ಸೋತಿದ್ದ ಅರುಣ್​ ಕುಮಾರ್​ ಪುತ್ತಿಲ ಚುನಾವಣೆಯಲ್ಲಿ ಸೋತ ಬಳಿಕ ಕಳೆದ ವರ್ಷ ಮಾರ್ಚ್​​ನಲ್ಲಿ ಮತ್ತೆ ಬಿಜೆಪಿಗೆ ಸೇರ್ಪಡೆಯಾಗಿದ್ದರು

 

Comments (0)

Your email address will not be published. Required fields are marked *

Back to top button