Thursday, November 20, 2025
21.7 C
Bengaluru
Google search engine
LIVE
ಮನೆಜನಸಾಮಾನ್ಯರ ದನಿಬಸ್‌ಗಳಿಗೆ ಕನ್ನಡ ನಾಮಫಲಕ ಅಳವಡಿಸುವ ಅಭಿಯಾನ

ಬಸ್‌ಗಳಿಗೆ ಕನ್ನಡ ನಾಮಫಲಕ ಅಳವಡಿಸುವ ಅಭಿಯಾನ

ಮಂಗಳೂರು : ವಿವಿಧ ಜಿಲ್ಲೆ, ತಾಲೂಕುಗಳಿಗೆ ಮಂಗಳೂರಿನಿಂದ ಹೊರಡುವ ವೇಗದೂತ, ಸರ್ವಿಸ್ ಹಾಗೂ ಖಾಸಗಿ ಬಸ್ ರೂಟ್‌ಗಳ ಬಸ್​ಗಳಿಗೆ ಕನ್ನಡ ನಾಮಫಲಕಗಳ ಸ್ಟಿಕರ್ ಅಂಟಿಸುವ ಅಭಿಯಾನ ಆರಂಭವಾಗಿದೆ. ಈ ವಾರಾಂತ್ಯದವರೆಗೆ ಈ ಅಭಿಯಾನ ನಡೆಯಲಿದೆ. ಮಂಗಳೂರಿನ ಸಹಾಯಕ ಸಾರಿಗೆ ಅಧಿಕಾರಿ (ಎಆರ್‌ಟಿಒ) ವಿಶ್ವನಾಥ್ ನಾಯ್ಕ್ ಅವರ ನೇತೃತ್ವದಲ್ಲಿ ನಗರದ ಸರ್ವಿಸ್ ಬಸ್‌ ನಿಲ್ದಾಣದಲ್ಲಿ ಬಸ್​ಗಳಿಗೆ ಕನ್ನಡ ನಾಮಫಲಕಗಳ ಸ್ಟಿಕರ್ ಅಳವಡಿಕೆ ಅಭಿಯಾನ ನಡೆಯಿತು.

ಬಸ್‌ಗಳ ಮಾರ್ಗಗಳನ್ನು ಕನ್ನಡದಲ್ಲಿ ನಮೂದಿಸಬೇಕಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ಕೆಲವು ಬಸ್‌ ಗಳು ಈ ನಿಯಮವನ್ನು ಪಾಲಿಸುತ್ತಿಲ್ಲ. ಇದೀಗ ಈ ವಾರಾಂತ್ಯದವರೆಗೆ ಖಾಸಗಿ ಬಸ್​ಗಳಿಂದಲೇ ಹಣ ಭರಿಸಿಕೊಂಡು ಕನ್ನಡ ನಾಮಫಲಕದ ಸ್ಟಿಕರ್ ಅಳವಡಿಕೆ ಕಾರ್ಯ ನಡೆಯಲಿದೆ. ಮುಂದಿನ ವಾರದಿಂದ ದಂಡ ವಿಧಿಸುವ ಕಾರ್ಯ ನಡೆಯಲಿದೆ ಎಂದು ಎಆರ್‌ಟಿಒ ವಿಶ್ವನಾಥ್ ನಾಯ್ಕ್ ತಿಳಿಸಿದರು.

ಬಸ್‌ ಗಳಲ್ಲಿ ಕನ್ನಡ ನಾಮಫಲಕ ಕಡ್ಡಾಯಗೊಳಿಸಲಾಗಿದ್ದರೂ, ಬಹುತೇಕ ಖಾಸಗಿ ಬಸ್​ನಲ್ಲಿ ಇದನ್ನು ಪಾಲಿಸುತ್ತಿಲ್ಲ. ಈ ಬಗ್ಗೆ ನಿರಂತರವಾಗಿ ಬಂಧಪಟ್ಟವರಿಗೆ ದೂರು ನೀಡಲಾಗುತ್ತಿದೆ. ಇದೀಗ ಆರ್‌ಟಿಒ ಮೂಲಕ ಈ ಕಾರ್ಯ ಆರಂಭಗೊಂಡಿದೆ ಎಂದು ಸಾಮಾಜಿಕ ಕಾರ್ಯಕರ್ತ ಜಿ.ಕೆ. ಭಟ್ ತಿಳಿಸಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments