ಬೆಳಗಾವಿ : ಮುಸ್ಲಿಂ ಸಮುದಾಯದ ಬಗ್ಗೆ ನೀಡಿರುವ ಹೇಳಿಕೆಯನ್ನು ನಾನು ಖಂಡಿಸುತ್ತೇನೆ ಎಂದು ಶಾಸಕ ಬಸನಗೌಡ್ ಯತ್ನಾಳ ವಿರುದ್ಧ ಸಿ. ಪುಟ್ಟರಂಗಶೆಟ್ಟಿ ವಾಗ್ದಾಳಿ ನಡೆಸಿದರು.

ಮುಸ್ಲಿಂರನ್ನು ತುಚ್ಚವಾಗಿ ಕಾಣುತ್ತಾ, ಅವರು ವಿರುದ್ಧ ಹೇಳಿಕೆ ನೀಡುತ್ತಾ ಚುನಾವಣೆಯಲ್ಲಿ ಅವರು ಗೆದ್ದಂತಹವರು. ಯತ್ನಾಳೆ ನಾನೇ ಮಹಾನ್ ನಾಯಕ ಎಂಬಂತೆ ಮಾತಾಡ್ತಾರೆ. ಸ್ವಪಕ್ಷಿಯರ ವಿರುದ್ದವೇ ಅವರು ಹೇಳಿಕೆಗಳನ್ನು ನೀಡ್ತಾರೆ. ಅವರ ಪಕ್ಷದ ಹೈಕಮಾಂಡ್ ಆಯ್ಕೆಗಳನ್ನು ಒಪ್ಪಲು ತಯಾರಿಲ್ಲ. ಬಿಜೆಪಿಯಲ್ಲಿ ಇಂತಹ ನಾಯಕರನ್ನು ಬೆಳೆಸಿದ್ರೆ ಬಿಜೆಪಿ ಸರ್ವನಾಶವಾಗಲಿದೆ ಎಂದು ಪುಟ್ಟರಂಗ ಶೆಟ್ಟಿ ಹೇಳಿದರು.


