Freedom TV

ಫ್ಲೆಕ್ಸ್, ಬ್ಯಾನರ್ ಹಾಕಿದ್ದಕ್ಕೆ ಬಿತ್ತು 50ಸಾವಿರ ದಂಡ..!

 

ಬೆಂಗಳೂರು; ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಅನಧಿಕೃತ ಬ್ಯಾನರ್, ಫ್ಲೆಕ್ಸ್ ತೆರವು ಕಾರ್ಯಾಚರಣೆ ಆರಂಭವಾಗಿದ್ದು, ಮಿಲ್ಲರ್ ಟ್ಯಾಂಕ್ ಬೆಡ್ ಏರಿಯಾದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ಅಳವಡಿಸಲಾಗಿದ್ದ ಅನಧಿಕೃತ ಬ್ಯಾನರ್‌ಗಳನ್ನು ತೆರವುಗೊಳಿಸಿ 50 ಸಾವಿರ ದಂಡ ವಿಧಿಸಲಾಗಿದೆ. ಇನ್ನು ಬೆಂಗಳೂರಿನ ಪೂರ್ವ ವಲಯ ವಸಂತನಗರ ವ್ಯಾಪ್ತಿಗೆ ಬರುವ ಸ್ಯಾಂಕಿ ರಸ್ತೆಯ, ರೇನ್ ಟ್ರಿ ಬೊಲೆವಾರ್ಡ್ ಕಟ್ಟಡದ ಹತ್ತಿರ ಅಳವಡಿಸಿದ್ದ ಬ್ಯಾನರ್‌
ತೆರವುಗೊಳಿಸಿ, ಬ್ಯಾನರ್ ಅಳವಡಿಸಿದ್ದವರಿಗೆ ₹50,000 ದಂಡ ವಿಧಿಸಲಾಗಿದೆ ಎಂದು ಬಿಬಿಎಂಪಿ ಹೇಳಿದೆ.

“ವಸಂತನಗರ ವ್ಯಾಪ್ತಿಗೆ ಬರುವ ಸ್ಯಾಂಕಿ ರಸ್ತೆಯ, ರೇನ್ ಟ್ರಿ ಬೊಲೆ ವಾರ್ಡ್ ಕಟ್ಟಡ ಹತ್ತಿರ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ 2023ರ ಕಾಂಗ್ರೆಸ್ ಅಭ್ಯರ್ಥಿ ಕೆಪಿಸಿಸಿ ಕೋ-ಅರ್ಡಿನೇಟರ್ ಹಾಗೂ ಎಬಿಡಿ ಗ್ರೂಪ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ರಾಜೀವ್ ಗೌಡ ಅವರು ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಸಚಿವ ಕೆ.ಹೆಚ್.ಮುನಿಯಪ್ಪ ಅವರ ಜನ್ಮ ದಿನಾಚರಣೆಯ ಅಂಗವಾಗಿ ಅನಧಿಕೃತವಾಗಿ ಬ್ಯಾನರ್ ಅಳವಡಿಸಿರುವುದು ಕಂಡುಬಂದಿದೆ.

ಅನಧಿಕೃತವಾಗಿ ಬ್ಯಾನರ್ ಅಳವಡಿಸಿರುವ ಬಗ್ಗೆ ಪಾಲಿಕೆ ವತಿಯಿಂದ ಅಧಿಕೃತವಾಗಿ ಪರವಾನಿಗೆ ಅಥವಾ ಅನುಮತಿಯನ್ನು ಪಡೆದಿಲ್ಲ. ಈ ಹಿನ್ನೆಲೆ, ಅನಧಿಕೃತವಾಗಿ ಫ್ಲೇಕ್ಸ್‌ ಅಳವಡಿಸಿರುವವರಿಗೆ ₹50,000 ದಂಡ ವಿಧಿಸಲಾಗಿದೆ. ಹಾಗೇಯೇ, ಪಾಲಿಕೆ ಮುಖ್ಯ ಆಯುಕ್ತ ಅವರ ಖಾತೆಗೆ ದಂಡದ ಹಣವನ್ನು ಪಾವತಿಸುವಂತೆ ವಸಂತನಗರದ ಸಹಾಯಕ ಕಂದಾಯ ಅಧಿಕಾರಿ ಪತ್ರದ ಮೂಲಕ ಸೂಚಿಸಿದ್ದಾರೆ.

Comments (0)

Your email address will not be published. Required fields are marked *

Back to top button