#Exclusive NewsTop Newsಸುದ್ದಿ

ಪ್ರೀತಿಯ ಗೆಳೆಯನಿಗೆ ಮಾಜಿ ಗೆಳತಿಯಿಂದ ಭಾವುಕ ವಿದಾಯ..!

ಕೈಗಾರಿಕೋದ್ಯಮಿ ರತನ್​ ಟಾಟಾ ನಿಧನರಾಗಿದ್ದಾರೆ. 86ನೇ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಗೆ ತುತ್ತಾಗಿ ಉಸಿರು ನಿಲ್ಲಿಸಿದ್ದಾರೆ. ಸೋಮವಾರದಂದು ಮುಂಬೈನ ಬ್ರೀಚ್​ ಕ್ಯಾಂಡಿ ಆಸ್ಪತ್ರೆಗೆ ದಾಖಲಾದ ಅವರು ಬುಧವಾರ ರಾತ್ರಿಯಂದು ಕೊನೆಯುಸಿರೆಳೆದಿದ್ದಾರೆ. ಇವರ ಸಾವಿಗೆ ದೇಶದ ನಾಗರೀಕರು ಕಣ್ಣೀರು ಸುರಿಸಿದ್ದಾರೆ. ರತನ್​ ಟಾಟಾರನ್ನು ಕಳೆದುಕೊಂಡ ಮಾಜಿ ಗೆಳತಿ ಸಿಮಿ ಗರೆವಾಲ್​​ ಕೂಡ ಭಾವುಕ ಸಂದೇಶ ಬರೆದಿದ್ದಾರೆ.

ಎಕ್ಸ್​ನಲ್ಲಿ ಬರೆದುಕೊಂಡಿದ್ದರುವ ಸಿಮಿ ಗೆರೆವಾಲ್​, ‘‘ನಿನ್ನ ನಷ್ಟವನ್ನು ಸಹಿಸಿಕೊಳ್ಳುವುದು ತುಂಬಾ ಕಷ್ಟ.. ತುಂಬಾ ಕಷ್ಟ.. ವಿದಾಯ ನನ್ನ ಸ್ನೇಹಿತ’’ ಎಂದು ಬರೆದುಕೊಂಡಿದ್ದಾರೆ.

 

ಸಿಮಿ ಗೆರೆವಾಲ್​ ಯಾರು?

ರತನ್​ ಟಾಟಾ ಮತ್ತು ಸಿಮಿ ಗೆರೆವಾಲ್​ ನಿಕಟ ಸ್ನೇಹಿತರಾಗಿದ್ದು, ಡೇಟಿಂಗ್​ ಮಾಡುತ್ತಿದ್ದರು. ಈ ವಿಚಾರವನ್ನು ಸಿಮಿ ಹೇಳಿಕೊಂಡಿದ್ದರು. 2011ರಲ್ಲಿ ಸಂದರ್ಶನವೊಂದರಲ್ಲಿ ‘‘ನಾನು ಮತ್ತು ರತನ್​​ ಬಹಳ ಹಿಂದೆ ಹೋಗುತ್ತೇವೆ. ಅವರು ಪರಿಪೂರ್ಣ ವ್ಯಕ್ತಿ, ಹಾಸ್ಯ ಪ್ರಜ್ಞೆ ಹೊಂದಿದ್ದಾರೆ. ಸಾಧಾರಣ ಮತ್ತು ಪರಿಪೂರ್ಣ ವ್ಯಕ್ತಿ. ಹಣವು ಅವರ ಪ್ರೇರಕ ಶಕ್ತಿಯಾಗಿರಲಿಲ್ಲ’’ ಎಂದು ಹೇಳಿದ್ದರು.ರತನ್​ ಟಾಟಾರವರು ಸಿಮಿ ಗೆರೆವಾಲ್​​ರವರ ಚಾಟ್​​ ಶೋದಲ್ಲಿ ಕಾಣಿಸಿಕೊಂಡಿದ್ದರು. ಇಬ್ಬರು ಮದುವೆಯಾಗಲು ಹಲವು ಬಾರಿ ಬಯಸಿದ್ದರಂತೆ. ಈ ವಿಚಾರವನ್ನು ಅವರು ಬಹಿರಂಗ ಪಡಿಸಿದ್ದರು. ಆದರೆ ಇಲ್ಲಿಯವರೆಗೆ ಇಬ್ಬರು ಮದುವೆಯಾಗಿಲ್ಲ.

 

ಎವರ್​ಗ್ರೀನ್​ ಲೌವ್​ ಸ್ಟೋರಿ

ರತನ್​ ಟಾಟಾ ಕೂಡ ತಮ್ಮ ಲವ್​ ಸ್ಟೋರಿ ಬಗ್ಗೆ ಹಂಚಿಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಲು ಆಗಲಿಲ್ಲ ಎಂದು ಹೇಳಿಕೊಂಡಿದ್ದರು.

‘ಕಾಲೇಜಿನ ನಂತರ, ನಾನು ಲಾಸ್ ಏಂಜಲೀಸ್‌ನಲ್ಲಿನ ಆರ್ಕಿಟೆಕ್ಚರ್ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಬಂದೆ. ಅಲ್ಲಿ ನಾನು 2 ವರ್ಷಗಳ ಕಾಲ ಕೆಲಸ ಮಾಡಿದೆ. ಸ್ವಂತ ಕಾರು ಖರೀದಿಸಿದೆ, ನನ್ನ ಕೆಲಸವನ್ನು ಇಷ್ಟಪಟ್ಟೆ. ಲಾಸ್ ಏಂಜಲೀಸ್‌ನಲ್ಲಿ ನಾನು ಒಬ್ಬಾಕೆಯನ್ನು ಪ್ರೀತಿಸುತ್ತಿದ್ದೆ ಮತ್ತು ನಮ್ಮಿಬ್ಬರ ಮದುವೆಯಾಗುವುದು ಖಚಿತವಾಗಿತ್ತು. ಅದೇ ಸಮಯದಲ್ಲಿ ನನ್ನ ಅಜ್ಜಿಯ ಆರೋಗ್ಯ ಸರಿ ಇರ್ಲಿಲ್ಲ. ಹೀಗಾಗಿ ಅವರನ್ನು ನೋಡಲೆಂದು ನಾನು ತಾಯ್ನಾಡಿಗೆ ಹಿಂದಿರುಗಲು ನಿರ್ಧರಿಸಿದ್ದೆ.

ನಾನು ಮದುವೆಯಾಗ ಬಯಸಿದ್ದ ಹುಡುಗಿಯೂ ನನ್ನೊಂದಿಗೆ ಭಾರತಕ್ಕೆ ಬರುತ್ತಾಳೆಂದು ಭಾವಿಸಿದ್ದೆ. ಆದ್ರೆ, ಆಕೆ ಭಾರತಕ್ಕೆ ಬರ್ಲಿಲ್ಲ. 1962ರ ಇಂಡೋ-ಚೀನಾ ಯುದ್ಧದ ಕಾರಣ ಪೋಷಕರು ಆಕೆಯನ್ನು ಎಲ್ಲಿಗೂ ಹೋಗಲು ಬಿಡ್ಲಿಲ್ಲ. ಇದಾದ ಬಳಿಕ ನಮ್ಮ ಸಂಬಂಧ ದೂರವಾಯ್ತು. ಇದಾದ ಮೇಲೆ ನನ್ನ ಬದುಕಿನಲ್ಲಿ ಬಹಳ ಮಂದಿ ಮಹಿಳೆಯರು ಬಂದು ಹೋದರು. ಆದರೆ ಯಾರೂ ತನ್ನ ಕೈಹಿಡಿಯಲಿಲ್ಲ ಎಂದು ರತನ್​ ಟಾಟಾ ಹೇಳಿದ್ದರು.

Comments (0)

Your email address will not be published. Required fields are marked *

Back to top button