Wednesday, April 30, 2025
24 C
Bengaluru
LIVE
ಮನೆ#Exclusive Newsನಾವು ಜೆಡಿಎಸ್ ಗೆ ಪುನರ್ಜನ್ಮ ಕೊಟ್ಟಿದ್ದೇವೆ:ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

ನಾವು ಜೆಡಿಎಸ್ ಗೆ ಪುನರ್ಜನ್ಮ ಕೊಟ್ಟಿದ್ದೇವೆ:ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

ಹುಬ್ಬಳ್ಳಿ: ಜೆಡಿಎಸ್ ಗೆ ನಾವು ಪುನರ್ಜನ್ಮ ನೀಡಿದ್ದೇವೆ. ಹೀಗಾಗಿ ಹೆಚ್.ಡಿ ಕುಮಾರಸ್ವಾಮಿ ಚನ್ನಪಟ್ಟಣ ಟಿಕೆಟ್ ತ್ಯಾಗ ಮಾಡಲಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಮಗೆ ಹೆಚ್.ಡಿ ಕುಮಾರಸ್ವಾಮಿ ಸಹಾಯಬೇಕು. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಶಕ್ತಿ ಬೇಕು. ಮೈತ್ರಿಯಿಂದ ಎರಡೂ ಪಕ್ಷದವರಿಗೆ ಲಾಭ ಆಗಿದೆ. ನಮ್ಮ ಪಕ್ಷದ ಕಾರ್ಯಕರ್ತರಿಗೆ ಟಿಕೆಟ್ ಕೊಡಬೇಕು ಎಂಬುದು ಮುಖ್ಯ. ನಾವು ಜೆಡಿಎಸ್ ಗೆ ಪುನರ್ಜನ್ಮ ಕೊಟ್ಟಿದ್ದೇವೆ. ಹೀಗಾಗಿ ಕುಮಾರಸ್ವಾಮಿ ಟಿಕೆಟ್ ತ್ಯಾಗ ಮಾಡಬೇಕು, ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ಗೆ ಎನ್ ಡಿಎ ಟಿಕೆಟ್ ನೀಡಬೇಕು ಎಂದು ಹೇಳಿದರು. ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ದೊಡ್ಡ ಹೃದಯ ಪ್ರದರ್ಶಿಸಿ ಚನ್ನಪಟ್ಟಣ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಡಬೇಕು.

ಶಿಗ್ಗಾವಿ ಟಿಕೆಟ್ ಬೊಮ್ಮಾಯಿ ಮಗನಿಗೆ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಯತ್ನಾಳ್, ಬೊಮ್ಮಾಯಿ ಅವರನ್ನು ಯಾಕೆ ಎಳೆಯುತ್ತೀರಿ? ಅವರದ್ದೇನು ತಪ್ಪಿಲ್ಲ. ಕರ್ನಾಟಕದಲ್ಲಿ ನಂಬರ್ 1 ಇದ್ದವರಿಂದ ಇದು ಪಾಲನೆ ಆಗಬೇಕು. ಬೊಮ್ಮಾಯಿ ಅವರನ್ನ ಯಾಕೆ ಬಲಿ ಪಶು ಮಾಡ್ತೀರಿ? ಎಲ್ಲರಿಗೂ ಕೊಟ್ಟ ಮೇಲೆ ಅವರು ಮಗನಿಗೆ ಕೇಳಿದ್ದಾರೆ, ಉಪ ಚುನಾವಣೆ ಟಿಕೆಟ್ ವಿಚಾರವನ್ನು ನಮ್ಮ ಪಕ್ಷದ ಹಿರಿಯರು ನಿರ್ಣಯ ಮಾಡುತ್ತಾರೆ ಎಂದರು.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments