ಬೆಂಗಳೂರು : ಕೊನೆಗೂ ಸಿಎಂ ಸಿದ್ದರಾಮಯ್ಯ ಭೇಟಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಮಯಾವಕಾಶ ನೀಡಿದ್ದಾರೆ. ನಾಳೆ ಅಂದರೆ ಡಿಸೆಂಬರ್ 19 ರಂದು ಬೆಳಗ್ಗೆ 11 ಗಂಟೆಗೆ ಉಭಯ ನಾಯಕರು ಮುಖಾಮುಖಿಯಾಗಲಿದ್ದಾರೆ.

ನಾಲ್ಕು ಬಾರಿ ಪತ್ರ ಬರೆದಿದ್ದ ಸಿಎಂ ಸಿದ್ದರಾಮಯ್ಯ..!
ಪ್ರಧಾನಿ, ಗೃಹಸಚಿವ, ಕೃಷಿ ಸಚಿವರಿಗೂ ನಾಲ್ಕು ಬಾರಿ ಪತ್ರ ಬರೆದಿದ್ದು ಭೇಟಿಗೆ ಅವಕಾಶ ನೀಡಿರಲಿಲ್ಲ. ಈ ಬಾರಿಯ ಬೆಳಗಾವಿ ಅಧೀವೇಶನದಲ್ಲಿ ಬಿಜೆಪಿ ನಾಯಕರಿಗೆ ಕೈಮುಗಿದು ಭೇಟಿ ಅವಕಾಶ ಮಾಡಿಕೊಡಿ ಎಂದಿದ್ದರು.
ಜಿಎಸ್ಟಿ ಬಾಕಿ, ಬರ ಪರಿಹಾರ ಕೇಂದ್ರ ಇತರ ಯೋಜನೆಗಳ ಕುರಿತು ಪ್ರಧಾನಮಂತ್ರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದು ಚರ್ಚಿಸಲು ಬಯಸಿದ್ದರು.
ನಾಳೆ ಪ್ರಧಾನಮಂತ್ರಿ ಮೋದಿ ಭೇಟಿಗೆ ಅವಕಾಶ ನೀಡಿದ್ದು, ಇದೇ ವೇಳೆ ಬರ ಪರಿಹಾರ, ನರೇಗ ಯೋಜನೆಯಡಿ ಮಾನವ ಸಂಪನ್ಮೂಲ ಹೆಚ್ಚಿಸುವ ಬಗ್ಗೆ ಹಾಗೂ ರಾಜ್ಯದ ಸ್ಥಿತಿಗತಿಗಳ ಬಗ್ಗೆ ಚರ್ಚೆ ಮಾಡಿ ಮನವಿ ಸಲ್ಲಿಸಲಿದ್ದಾರೆ.
ನಾಲ್ಕು ದಿನಗಳ ದೆಹಲಿ ಪ್ರವಾಸ ಕೈಗೊಂಡಿರೋ ಸಿಎಂ – ಡಿಸಿಎಂ ..!
ನಾಲ್ಕು ದಿನಗಳ ಕಾಲ ದೆಹಲಿ ಪ್ರವಾಸದಲ್ಲಿರೋ ಇಬ್ಬರು ನಾಯಕರು ಇದೇ 21 ರಂದು ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ನಿಗಮ ಮಂಡಳಿ ನೇಮಕ, ಮುಂಬರುವ ಲೋಕಸಭಾ ಚುನಾವಣೆ ಕಾರ್ಯತಂತ್ರ ಕುರಿತು ಹಲವು ವಿಷಯಗಳ ಬಗ್ಗೆ ಚರ್ಚಿಸಿ ಅಂತಿಮ ರೂಪುರೇಷು ಪಡೆದುಕೊಳ್ಳಲಿದ್ದಾರೆ.
ರಾಜ್ಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿರೋ ಜಾತಿಗಣತಿ ವಿಚಾರವಾಗಿ ವರಿಷ್ಠರು ಸಿಎಂ ಹಾಗೂ ಡಿಸಿಎಂ ಜೊತೆ ಚರ್ಚಿಸೋ ಸಾಧ್ಯತೆ ಇದೆ ಎನ್ನುತ್ತಿವೆ ಮೂಲಗಳು


