ಜಿಲ್ಲೆ

ನಾಳೆ ಡಿಸಿಸಿ ಬ್ಯಾಂಕ್ ಎಲೆಕ್ಷನ್ : ಇಂದು ಬ್ಯಾಲಹಳ್ಳಿ ಗೋವಿಂದಗೌಡಗೆ ಲೋಕಾ ಶಾಕ್

ಚಿಕ್ಕಬಳ್ಳಾಪೂರ : ನಾಳೆ ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಎಲೆಕ್ಷನ್ ಹೊತ್ತಲ್ಲೇ, ಲೋಕಾಯುಕ್ತ ಟೀಂ ಬಿಗ್ ಶಾಕ್ ನೀಡಿದೆ. ನಾಳೆ ಚುನಾವಣೆ ಇರುವಾಗ ಇಂದು ಪ್ರಭಾವಿ ಮುಖಂಡನ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳ ಟೀಂ ದಾಳಿ ಮಾಡಿದೆ.

ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಮತ್ತು ಮಾಜಿ ಕಾಂಗ್ರೆಸ್ಸಿಗ ಬ್ಯಾಲಹಳ್ಳಿ ಗೋವಿಂದಗೌಡ ಅವರ, ಚಿಂತಾಮಣಿ ನಿವಾಸದ ಮೇಲೆ ದಾಳಿ ಮಾಡಲಾಗಿದೆ. ಆದಾಯಕ್ಕೂ ಮೀರಿ ಆಸ್ತಿ ಗಳಿಕೆ‌ ಆರೋಪದಡಿ ದಾಳಿ ಮಾಡಲಾಗಿದೆ.
ಕೆಲ ವರ್ಷಗಳ ಹಿಂದೆಯೇ ಕಾಂಗ್ರೆಸ್​ ಪಕ್ಷದಿಂದ ಹೊರಗೆ ಬಂದಿದ್ದ ಗೋವಿಂದಗೌಡ, ಬಳಿಕ ಯಾವುದೇ ಪಕ್ಷವನ್ನೂ ಸೇರಲಿಲ್ಲ.

ಇದೀಗ ನಾಳೆ ಡಿಸಿಸಿ ಬ್ಯಾಂಕ್ ಚುನಾವಣೆ ನಡೀತಿದ್ದು, ನಿರ್ದೇಶಕ ಸ್ಥಾನಕ್ಕೆ ಕೋಲಾರ ಜಿಲ್ಲಾ ಸಹಕಾರ ಒಕ್ಕೂಟದಿಂದ ಇಂಡಿಪೆಂಡೆಂಟ್​ ಸ್ಪರ್ಧಿಸಿದ್ದಾರೆ. ಗೋವಿಂದೇಗೌಡ ವಿರುದ್ಧ ದೊಡ್ಡ ಮಟ್ಟದ ಸಮರ ಸಾರಿದ್ದ ಕಾಂಗ್ರೆಸ್ ನಾಯಕರು, ಅವರನ್ನ ಖೆಡ್ಡಾಗೆ ಕೆಡವಲು ತಂತ್ರ ರೂಪಿಸಿದ್ರು. ಇಂಥಾ ಹೊತ್ತಲ್ಲೇ ಬ್ಯಾಲಹಳ್ಳಿ ಗೋವಿಂದಗೌಡ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ಇನ್ನು, ಬ್ಯಾಂಕ್ ನ ಹಣ ದುರ್ಬಳಕೆ ಆರೋಪ ಹಿನ್ನೆಲೆ ಚಿಂತಾಮಣಿಯ ಡಿಸಿಸಿ ಬ್ಯಾಂಕ್ ಮೇಲೆಯೂ ಲೋಕಾಯುಕ್ತ ರೇಡ್ ಮಾಡಿದೆ. ಲೋಕಾಯುಕ್ತ ಡಿವೈಎಸ್ಪಿ ವೀರೇಂದ್ರ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಮಹತ್ವದ ದಾಖಲೆಗಳು ಸೇರಿದಂತೆ ಕಂಪ್ಯೂಟರ್​​ಗಳನ್ನು ಪರಿಶೀಲನೆ ನಡೆಸಲಾಗಿದೆ.

Comments (0)

Your email address will not be published. Required fields are marked *

Back to top button