Thursday, November 20, 2025
19.9 C
Bengaluru
Google search engine
LIVE
ಮನೆ#Exclusive Newsನಾನು ಮತ್ತೆ ಬಿಜೆಪಿಗೆ ಬರ್ತಿನಿ-ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​

ನಾನು ಮತ್ತೆ ಬಿಜೆಪಿಗೆ ಬರ್ತಿನಿ-ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​

ವಿಜಯಪೂರ : ನಾನು ಬಿಜೆಪಿಗೆ ಮತ್ತೆ ಮರಳಿ ಬಂದೆ ಬರ್ತಿನಿ.ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರನನ್ನು ಕೆಳಗಿಳಿಸಿದರೆ ನಾನು ಬಿಜೆಪಿಗೆ ಬರುತ್ತೇನೆ ಎಂದು ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಹೇಳಿದ್ದಾರೆ.

ನಾನು ರಾಜ್ಯದ ಯಾವ ನಾಯಕರ ಮನೆಗೂ ಹೋಗಿಲ್ಲ ,ಹೋಗೊದಿಲ್ಲ, ಹೋಗುವ ಅವಶ್ಯಕತೆ ನನಗಿಲ್ಲ ಎಂದು ಹೊಸ ಬಾಂಬ್​ ಸಿಡಿಸಿದ ವಿಜಯಪೂರ ಶಾಸಕ ಯತ್ನಾಳ್​.

ಬಿಜೆಪಿಯ ಹೈಕಮಾಂಡ್​ ನಾಯಕರು ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ.ನನ್ನನ್ನೂ ಪಕ್ಷದ ವರಿಷ್ಠರು ಮತ್ತೆ ಬಿಜೆಪಿಗೆ ಕರೆಸಿಕೊಳ್ಳುವುದಾಗಿ ಹೇಳಿದ್ದಾರೆ ​.ನನ್ನನ್ನೂ ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವಂತೆ ರಾಜ್ಯದ ಮುಖಂಡರು ಸೇರಿದಂತೆ ಯಾರನ್ನೂ ಕೇಳಿಲ್ಲ,ಕೆಲವರಿಗೆ ಹುಚ್ಚು ಹಿಡಿದಿದೆ.ನನ್ನನ್ನೂ ಮತ್ತೆ ಪಕ್ಷಕ್ಕೆ ವಾಪಸ್​ ತೆಗೆದುಕೊಳ್ಳಲ್ಲ ಎಂಬ ಭ್ರಮೆಯಲ್ಲಿದ್ದಾರೆ ಎಂದು ರಮೇಶ್​ ಜಿಗಜಿಣಗಿಗೆ ವ್ಯಂಗ್ಯ ಮಾಡಿದ ಉಚ್ಚಾಟಿತ ಶಾಸಕ ಯತ್ನಾಳ್​

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments