ಮನರಂಜನೆಸಿನಿಮಾ

ನಯನತಾರಾ ಬರ್ತ್​ಡೇಗೆ ಉಡುಗೊರೆಯಾಗಿ ಸಿಕ್ತು 3 ಕೋಟಿ ರೂಪಾಯಿ ಕಾರು ; ಕೊಟ್ಟಿದ್ದು ಯಾರು ?

ನಟಿ ನಯನತಾರಾ ಅವರು ನವೆಂಬರ್ 18ರಂದು ಬರ್ತ್​ಡೇ ಆಚರಿಸಿಕೊಂಡರು. ಈ ವೇಳೆ ಅವರಿಗೆ ಅಭಿಮಾನಿಗಳ ಕಡೆಯಿಂದ ಶುಭಾಶಯ ಬಂತು. ಅವರ ಜನ್ಮದಿನಕ್ಕೆ ವಿಶೇಷ ಗಿಫ್ಟ್ ಸಿಕ್ಕಿದೆ. ಈ ವಿಚಾರವನ್ನು ಅವರು ಎರಡು ವಾರ ತಡವಾಗಿ ರಿವೀಲ್ ಮಾಡಿದ್ದಾರೆ. ನಯನತಾರಾ ಬರ್ತ್​ಡೇಗೆ ಸಿಕ್ಕಿದ್ದು ಅಂತಿಂಥ ಗಿಫ್ಟ್ ಅಲ್ಲ. ಬರೋಬ್ಬರಿ 3 ಕೋಟಿ ರೂಪಾಯಿ ಬೆಲೆಯ ಕಾರು. ಹಾಗಂತ ಇದನ್ನು ‘ಜವಾನ್’ ತಂಡದವರು ನೀಡಿದ್ದಲ್ಲ. ಅವರ ಪತಿ ವಿಘ್ನೇಶ್ ಶಿವನ್ ಅವರು ಈ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಫೋಟೋಗಳನ್ನು ಅವರು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.


ವಿಘ್ನೇಶ್ ಶಿವನ್ ಅವರು ಮರ್ಸೀಡಿಸ್ ಮೇಬ್ಯಾಕ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದರ ಬೆಲೆ 3 ಕೋಟಿ ರೂಪಾಯಿಗೂ ಅಧಿಕವಾಗಿದೆ ಎನ್ನಲಾಗಿದೆ. ಇತ್ತೀಚೆಗೆ ನಯನತಾರಾ ಅವರು ಈ ವಿಚಾರ ರಿವೀಲ್ ಮಾಡಿದ್ದಾರೆ. ಕಾರಿನ ಲೋಗೋದ ಫೋಟೋಗಳನ್ನು ಹಂಚಿಕೊಂಡಿರುವ ಅವರು, ‘ಮನೆಗೆ ಸ್ವಾಗತ ಬ್ಯೂಟಿ. ಸ್ವೀಟೆಸ್ಟ್ ಗಿಫ್ಟ್ ನೀಡಿದ ಪತಿಗೆ ಧನ್ಯವಾದ. ಲವ್​ ಯೂ’ ಎಂದು ಬರೆದುಕೊಂಡಿದ್ದಾರೆ.

Comments (0)

Your email address will not be published. Required fields are marked *

Back to top button