#Exclusive NewsTop Newsವಿಶೇಷಸುದ್ದಿ

ನನ್ನ ಕೊಲ್ಲಲು ಬಿಜೆಪಿ ಪಕ್ಷವು ಸಂಚು ರೂಪಿಸುತ್ತಿದೆ:ಅರವಿಂದ ಕೇಜ್ರಿವಾಲ್‌

 

ನವದೆಹಲಿ: ತಮ್ಮ ಮೇಲೆ ದಿಲ್ಲಿಯ ವಿಕಾಸಪುರಿಯಲ್ಲಿ ಶುಕ್ರವಾರ ನಡೆಯಿತು ಎನ್ನಲಾದ ಹಲ್ಲೆ ಘಟನೆ ಬಗ್ಗೆ ಕಿಡಿಕಾರಿರುವ ದಿಲ್ಲಿ ಮಾಜಿ ಸಿಎಂ ಹಾಗೂ ಆಪ ಪಕ್ಷದ ನಾಯಕ ಅರವಿಂದ  ಕೇಜ್ರಿವಾಲ್‌​ ‘ಗೂಂಡಾಗಳನ್ನು ಬಳಸಿ ನಿನ್ನೆ ಬಿಜೆಪಿ ದಾಳಿ ಮಾಡಿದೆ. ನನ್ನನ್ನು ಕೊಲ್ಲಲು ಬಯಸುತ್ತಿ ದ್ದೀರಾ? ಇದನ್ನೆಲ್ಲ ಬಿಡಿ, ತಾಕತ್ತಿದ್ದರೆ ಚುನಾವಣೆ ಎದುರಿಸಿ’ ಎಂದು ಸವಾಲು ಹಾಕಿದ್ದಾರೆ. ಈ ನಡುವೆ, ಆಪ್ ಸಂಸದ ಸಂಜಯ ಸಿಂಗ್ ಮಾತನಾಡಿ, ‘ಕೇಜ್ರಿವಾಲ್‌ ಅವರನ್ನು ಕೊಲ್ಲಲು ಬಿಜೆಪಿ ಸಂಚು ರೂಪಿಸುತ್ತಿದ್ದು, ಪೊಲೀಸರೂ ಅವರೊಂದಿಗೆ ಸೇರಿದ್ದಾರೆ. ಕೇಜ್ರಿವಾಲ್‌ ಜೀವಕ್ಕೆ ಸಂಚಕಾರ ಬಂದರೆ ಅದಕ್ಕೆ ಬಿಜೆಪಿಯೇ ಹೊಣೆ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ದೆಹಲಿ ವಿಪಕ್ಷ ನಾಯಕ ವಿಜೇಂದ್ರ ಗುಪ್ತಾ, ‘ಇದು ಚುನಾವಣೆಗೂ ಮುನ್ನ ಬಿಜೆಪಿಯ ಹೆಸರು ಕೆಡಿಸಲು ಆಪ್ ಆಡುತ್ತಿರುವ ನಾಟಕ’ ಎಂದು ವ್ಯಂಗ್ಯವಾಡಿದ್ದಾರೆ. ಆದರೆ ಹಲ್ಲೆ ಆರೋಪಕ್ಕೆ ಸಾಕ್ಷಿಯಾಗಿ ಯಾವುದೇ ವಿಡಿಯೋಗಳಿಲ್ಲ ಹಾಗೂ ಆಪ್ ದೂರು ನೀಡಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

Comments (0)

Your email address will not be published. Required fields are marked *

Back to top button