ಬೆಂಗಳೂರು : ನನಗೆ ಹಾರ್ಟ್ ಸರ್ಜರಿಯಾಗಿತ್ತು ಅದಷ್ಟು ರಿಕವರಿ ಆಗಿದ್ದೇನೆ. ಈಗ ಸಾರ್ವಜನಿಕರ ಭೇಟಿ ಆಗುತ್ತಿದ್ದೇನೆ ಎಂದು ಮಾಜಿ ಸಿಎಂ ಬಸವರಾಜು ಬೊಮ್ಮಾಯಿ ಹೇಳಿದರು. ಬೆಳಗಾವಿ ಅಧಿವೇಶನ ಮೊದಲ ವಾರ ಅಟೆಂಡ್ ಆಗಲ್ಲ. ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬೆಳವಣಿಗೆ ನಡೆದಿದೆ. ಪಂಚರಾಜ್ಯ ಚುನಾವಣೆ ಕೂಡ ನಡೆದಿದೆ. ರಾಜ್ಯ ಸರ್ಕಾರ ಆರು ತಿಂಗಳಾಯಿತು ಸರ್ಕಾರ ಆಡಳಿತ ಭ್ರಮನಿರಸವಾಗಿದೆ. ಕಾಂಗ್ರೆಸ್ನ ಗ್ಯಾಂರಂಟಿ ಯೋಜನೆಗಳು ವಿಫಲವಾಗಿದೆ ಎಂದು ವ್ಯಂಗ್ಯವಾಡಿದರು.

ಅನ್ನ ಭಾಗ್ಯದಲ್ಲಿ 10 ಕೆ.ಜಿ ಕೊಡುತ್ತೇವೆ ಎಂದಿದ್ರು ಆದ್ರೆ ಕೇಂದ್ರ ಅಕ್ಕಿ 5 kg ಬದಲು 3 ಕೆಜಿ ಅಕ್ಕಿ 2 kg ರಾಗಿ ವಿತರಣೆ ಮಾಡುತ್ತದೆ. ಕಾಳಸಂತೆಯಲ್ಲಿ ಅಕ್ಕಿ ಮಾರಾಟ ದಂಧೆ ನಡೆಯುತ್ತಿದೆ. ಸರ್ಕಾರದ ಅಧಿಕಾರಿಗಳು ಇದರಲ್ಲಿ ಶಾಮೀಲು ಆಗಿದ್ದಾರೆ. ಗೃಹಲಕ್ಷ್ಮೀ ಯೋಜನೆಯಲ್ಲಿ ಲೋಪವಾಗಿದೆ. ಹೆಣ್ಣು ಮಕ್ಕಳಿಗೆ ಸರ್ಕಾರ ಮೋಸ ಮಾಡುತ್ತಿದೆ. ಎರಡು ಬಾರಿ ವಿದ್ಯುತ್ ಬೆಲೆ ಹೆಚ್ಚಳ ಮಾಡಿದೆ. ಸರಾಸರಿಯಲ್ಲಿ ಭಾರಿ ವ್ಯತ್ಯಾಸವಾಗಿದೆ ಎಂದರು. ರೈತರಿಗೆ ಎರಡರಿಂದ ಮೂರು ಗಂಟೆವರೆಗೆ ಮಾತ್ರ ವಿದ್ಯುತ್ ನೀಡುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ರೈತರಿಗೆ ಮಾಡಿದ ಮಹಾ ಮೋಸವಾಗಿದೆ. ಇದನ್ನು ಸಹ ತೆಲಂಗಾಣದಲ್ಲಿ ಮಾಡಲು ಹೊರಟಿದ್ದಾರೆ.
ಈ ಬಾರಿ ಅಧಿವೇಶನದಲ್ಲಿ ಬಜೆಟ್ ಹಣ ಅಭಿವೃದ್ದಿಗೆ ಎಷ್ಟು ನೀಡಿದ್ದೀರಾ..? ನಮ್ಮ ಸರ್ಕಾರದ ಹಲವು ಕಾರ್ಯಕ್ರಮ ನಿಲ್ಲಿಸಿದ್ದೀರಿ..!ಇಂದಿನ ಆಡಳಿತ ನೋಡಿದ್ರೆ ಚಿಂತಾಜನಕವಾಗಿದೆ. ಎಸ್ಟಿಪಿಎಸ್ ಹಣ ಗ್ಯಾರಂಟಿಗೆ ಬಳಕೆ ಮಾಡಿದ್ದೀರಾ. ನಾವು ಇಟ್ಟಂತಹ ಹಣ ನಿಮ್ಮ ಗ್ಯಾರಂಟಿಗೆ ಉಪಯೋಗವಾಗಿದೆ. ಹಣಕಾಸಿನ ವ್ಯವಸ್ಥೆ ಹಾಳುಮಾಡಿದ್ದೀರಾ ನೀವು. ಆರ್ ಬಿಐ ಮೂರು ರಾಜ್ಯ ಬಗ್ಗೆ ವಾರ್ನಿಂಗ್ ಕೊಟ್ಟಿದೆ. ಕರ್ನಾಟಕದ ಒಳ್ಳೆ ಟ್ರ್ಯಾಕ್ ರಿಪೋರ್ಟ್ ಇದೆ ಎಂದು ಹೇಳಿದರು.


