ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಗೆ ನಿರಂತರ ಬೆದರಿಕೆ ಕರೆಗಳು ಬರುತ್ತಿದು, ಕಾರಿನಲ್ಲೇ ಸಲ್ಲುರನ್ನ ಮುಗಿಸೋದಾಗಿ ಥ್ರೆಟ್ ಕರೆ ಬಂದಿರುವುದಾಗಿ ವರದಿಯಾಗಿದೆ. ಮುಂಬೈ ವರ್ಲಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ,ಅಪರಿಚಿತನ ವಿರುದ್ಧವೇ ಕೇಸ್ ರಿಜೆಸ್ಟರ್ ಆಗಿದೆ.
ಬೆದರಿಕೆ ಹಿನ್ನೆಲೆಯಲ್ಲಿ ಬಾಲಿವುಡ್ ನಟ ಸಲ್ಲುಗೆ ಬಿಗಿ ಬಂದೋಬಸ್ತ್ ಒದಗಿಸಲಾಗಿದ್ದು ಬೆದರಿಕೆ ಪ್ರಕರಣ ಮುಂಬೈ ಪೊಲೀಸರ ನಿದ್ದೆಗೆಡಿಸಿದೆ.
ಸಲ್ಮಾನ್ ಬಳಸೋ ಕಾರಿನ ನಂಬರ್ ಸಂಗ್ರಹಿಸಿರುವ ಅಪರಿಚಿತ ,ಬಿಷ್ಣೋಯ್ ಬೆದರಿಕೆ ಬೆನ್ನಲ್ಲೇ ಪೊಲೀಸರು ಅಲರ್ಟ್ ಆಗಿದ್ದಾರೆ.ಒಟ್ಟಾರೆ ಸಲ್ಲು ಮುಗಿಸಲು ಯಾಕಿಷ್ಟು ಹಠ ಎಂಬ ಪ್ರಶ್ನೆ ಜನಸಾಮಾನ್ಯರಿಂದ ಸಾಮಾಜಿಕ ಜಾಲಾತಾಣದ ಮುಖಾಂತರ ವ್ಯಕ್ತವಾಗಿದೆ.