#Exclusive NewsTop Newsಸುದ್ದಿ

ನಟ ಮಯೂರ್ ಪಟೇಲ್ ವಿರುದ್ದ ಕೇಸ್​ ದಾಖಲು

 ಬೆಂಗಳೂರು: ನ್ಯಾಯಾಲಯದ ಆದೇಶ ಉಲ್ಲಂಘಿಸಿ ವಿವಾದಿತ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ ಕಾಂಪೌಂಡ್‌ ಉರುಳಿಸಿ ಅಕ್ರಮವಾಗಿ ಶೆಡ್ ನಿರ್ಮಿಸಿದ ಆರೋಪದಡಿ ನಟ ಮಯೂರ್ ಪಟೇಲ್ ಸೇರಿ ಇತರರ ವಿರುದ್ಧ ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಚ್‌ಎಸ್‌ಆರ್ ಲೇಔಟ್‌ನ ಸೋಮಸುಂದ್ರಪಾಳ್ಯ ನಿವಾಸಿ ಶಾಲಿನಿ ಎಂಬುವವರು ನೀಡಿದ ದೂರಿನ ಮೇರೆಗೆ ಮಯೂರ್, ಎನ್.ಆ‌ರ್.ಭಟ್ಟ, ಸುಬ್ರಹ್ಮಣ್ಯಂ ಸೇರಿ ಇತರರ ವಿರುದ್ಧ ಎಫ್‌ಐಆ‌ರ್ ದಾಖಲಿಸಿ ತನಿಖೆ ಕೈಗೊ ಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೂರಿನ ವಿವರ:ಬೆಂಗಳೂರು ದಕ್ಷಿಣ ತಾಲೂಕಿನ ಬೇಗೂರು ಹೋಬಳಿ ಹರಳಕುಂಟೆ ಗ್ರಾಮದ ಸರ್ವೆ ನಂಬರ್ 55/10ರಲ್ಲಿ 14 ಗುಂಟೆ ಜಮೀನು ನೋಂದಾಯಿತ ದಾನಪತ್ರದ ಮೂಲಕ ತನ್ನ ಪತಿ ಮಂಜುನಾಥ ರೆಡ್ಡಿಗೆ ಬಂದಿದೆ. ಈ ಜಮೀನಿನಲ್ಲಿ ಕಾಂಪೌಂಡ್ ಮತ್ತು ಖಾಲಿ ಜಾಗವಿದೆ. ಈ ಜಾಗದ ವಿಚಾರವಾಗಿ ಮಯೂರ್ ಮತ್ತು ಎನ್.ಆರ್.ಭಟ್ಟ ವಿರುದ್ಧ ಸಿವಿಲ್ ಕೋರ್‌ನಲ್ಲಿ ದಾವೆ ಹೂಡಲಾಗಿದೆ. ಕೋರ್ ಸ್ವತ್ತಿನ ಯಥಾಸ್ಥಿತಿ ಕಾಯ್ದು ಕೊಂಡು ಸ್ವಾಧೀನಕ್ಕೆ ತೊಂದರೆ ನೀಡದಂತೆ ಆದೇಶಿಸಿದೆ. ಆದರೆ, ಆರೋಪಿಗಳು ಅ.18ರಂದು ಬೆಳಗ್ಗೆ ಸುಮಾರು 75 ಮಂದಿ ಅಪರಿಚಿತರೊಂದಿಗೆ ಜಮೀನಿಗೆ ಅತಿಕ್ರಮ ಪ್ರವೇಶಿಸಿ ಕಾಂಪೌಂಡ್ ಉರುಳಿಸಿ, ಖಾಲಿ ಜಾಗದಲ್ಲಿ ಶೆಡ್ ನಿರ್ಮಿಸಿದ್ದಾರೆ. ಈ ಮೂಲಕ ಸುಮಾರು ₹10 ಲಕ್ಷ ನಷ್ಟವುಂಟು ಮಾಡಿದ್ದಾರೆ ಎಂದಿದ್ದಾರೆ.

Comments (0)

Your email address will not be published. Required fields are marked *

Back to top button