#Exclusive NewsTop Newsಸಿನಿಮಾಸುದ್ದಿ

ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್ ಅರಸ್ ನಿಧನ!

ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್ ಅರಸ್ (42) ಅನಾರೋಗ್ಯದಿಂದ ಶುಕ್ರವಾರ ಮುಂಜಾನೆ ನಿಧನ ಹೊಂದಿದ್ದಾರೆ. ಸಹೋದರ ದೀಪಕ್ ಅರಸ್ ನಿಧನದ ಬಗ್ಗೆ ಅಮೂಲ್ಯ ಸಾಮಾಜಿಕ ಜಾಲತಾಣ X ನಲ್ಲಿ ಪೋಸ್ಟ್ ಮಾಡಿದ್ದು, ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

ಮಲ್ಲೇಶ್ವರಂನ ನಿವಾಸದಲ್ಲಿ ಮುಂಜಾನೆ 6 ಗಂಟೆ ಸುಮಾರಿಗೆ ದೀಪಕ್ ನಿಧನರಾಗಿದ್ದಾರೆ. ಬೆಂಗಳೂರಿನ ಸುಮ್ಮನಹಳ್ಳಿಯ ರುದ್ರಭೂಮಿಯಲ್ಲಿ ದೀಪಕ್ ಅರಸ್ ಅಂತ್ಯ ಸಂಸ್ಕಾರ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.
”ನನ್ನ ಪ್ರೀತಿಯ ಸಹೋದರ ದೀಪಣ್ಣ ಇಂದು ಬೆಳಗ್ಗೆ 6 ಗಂಟೆಗೆ ನಮ್ಮನ್ನು ಅಗಲಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ನಿನ್ನನ್ನು ಕಳೆದುಕೊಂಡು ನಾವು ತೀವ್ರ ನೋವಿನಲ್ಲಿದ್ದೇವೆ. ನೀವು ಎಂದೆಂದಿಗೂ ನಮ್ಮೊಂದಿಗೆ ಇರುತ್ತೀರಿ” ಎಂದು ಅಮೂಲ್ಯ ಪೋಸ್ಟ್ ಮಾಡಿದ್ದಾರೆ.ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ದೀಪಕ್ ಅರಸ್, ಕುಟುಂಬ ಸಮೇತ ಶೇಷಾದ್ರಿಪುರ ನಿವಾಸದಲ್ಲಿ ವಾಸವಾಗಿದ್ದರು. ದೀಪಕ್ ಅರಸ್ ‘ಮನಸಾಲಜಿ’, ‘ಶುಗರ್ ಫ್ಯಾಕ್ಟರಿ’ ಸಿನಿಮಾಗಳನ್ನು ನಿರ್ದೇಶಿಸಿದ್ದರು.

Comments (0)

Your email address will not be published. Required fields are marked *

Back to top button