ಬಾಗಲಕೋಟೆ: ದೇಶದ್ರೋಹದ ಕೆಲಸ ಮಾಡುವವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ನ್ಯಾಯಮೂರ್ತಿ ಸಂತೋಷ ಹೆಗಡೆ ಹೇಳಿದರು.ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಇತ್ತೀಚಿಗೆ ಬಾಂಬ್ ಸ್ಪೋಟಗಳು ಆಗುತ್ತಿವೆ.ಅದರ ಹಿನ್ನಲೆಯನ್ನ ವಿಚಾರಣೆ ಮಾಡುವಂತಹ ಸಂಸ್ಥೆಗಳು ಶೀಘ್ರವಾಗಿ ವಿಚಾರಣೆ ಮಾಡಬೇಕು. ಯಾಕೆ ಹೀಗೆ ಆಗುತ್ತಿವೆ ಎಂಬುದನ್ನು ಸಾರ್ವಜನಿಕರಿಗೆ ತಿಳಿಸಬೇಕು.
ವಿಧಾನಸಭಾದಲ್ಲಿ ವಿರೋಧಿ ದೇಶದ ಪರ ಘೋಷಣೆಗೆ ಪ್ರತಿಕ್ರಿಯೆ :
ಇವತ್ತಿನ ರಾಜಕೀಯ ಪರಿಸ್ಥಿತಿಯಲ್ಲಿ ಸತ್ಯಕ್ಕೆ ಬೆಲೆ ಇಲ್ಲ, ತಾವು ಹೇಳಿದ್ದೆ ಸತ್ಯ ಎನ್ನುವಂತವರು ಹೆಚ್ಚಾಗಿದ್ದಾರೆ, ಅದರಿಂದ ಜನರನ್ನ ತಪ್ಪು ದಾರಿಗೆ ತೆಗೆದುಕೊಂಡು ಹೋಗುವಂತಹ ಪ್ರಯತ್ನ ನಡೆಯುತ್ತಿದೆ, ಎಂದರು.
ಜೈಕಾರ ಕೂಗಿದ್ದು ಟಿವಿಯಲ್ಲಿ ಬಂದಿತ್ತು, ಅವರ ಪಕ್ಕದಲ್ಲಿ ಇದ್ದವರು ಬಾಯಿಯ ಮುಚ್ಚಲು ಪ್ರಯತ್ನ ಮಾಡಿದ್ದಾರೆ.ಯಾಕೆ ಪ್ರತಿಕ್ರಿಯೆ ಕೊಡಬೇಕಿತ್ತು.ಜೈಕಾರ ಕೂಗಿದವರಿಗೆ ಶಿಕ್ಷೆಯಾಗುತ್ತಿತ್ತು.ಯಾವುದೇ ವಿಚಾರದಲ್ಲಿ ಚರ್ಚೆ ನಡೆಯಬೇಕಾದರೆ, ಸತ್ಯ ಬಹಳ ದೂರ ಇದೆ ಎಂದು ಹೇಳಿದರು.
ದೇಶದ್ರೋಹದ ಕೆಲಸ ಮಾಡಿದವರಿಗೆ ತಕ್ಕ ಶಿಕ್ಷೆ ಆಗಲಿ, ಸಂತೋಷ್ ಹೆಗಡೆ
RELATED ARTICLES