Wednesday, April 30, 2025
34.5 C
Bengaluru
LIVE
ಮನೆ#Exclusive Newsದೇಗುಲಗಳಲ್ಲಿ ಶುರುವಾಯ್ತು ರಾಜಕೀಯ! ವ್ಯವಸ್ಥಾಪನಾ ಸಮಿತಿ ರಚನೆಯ ಚುನಾವಣೆಯಲ್ಲಿ ಜಾತಿ ಲಾಬಿ ಜೋರಾಗಿದೆ....

ದೇಗುಲಗಳಲ್ಲಿ ಶುರುವಾಯ್ತು ರಾಜಕೀಯ! ವ್ಯವಸ್ಥಾಪನಾ ಸಮಿತಿ ರಚನೆಯ ಚುನಾವಣೆಯಲ್ಲಿ ಜಾತಿ ಲಾಬಿ ಜೋರಾಗಿದೆ….

ರಾಜ್ಯ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಗೆ ಸಂಬಂಧಪಟ್ಟ ದೇವಾಲಯಗಳ ಆಡಳಿತ ಮಂಡಳಿಗೆ ನೂತನ ವ್ಯವಸ್ಥಾಪನಾ ಸಮಿತಿಗೆ ರಾಜ್ಯಾದ್ಯಂತ ಅರ್ಜಿ ಆಹ್ವಾನಿಸಲಾಗಿದೆ. ಇವುಗಳಲ್ಲಿ 100ಕ್ಕೂ ಅಧಿಕ ಎ ಗ್ರೇಡ್ ದೇವಾಲಯಗಳಾಗಿದ್ದು, ಅವುಗಳ ವ್ಯವಸ್ಥಾಪನಾ ಸಮಿತಿ ರಚನೆಗೆ ರಾಜಕೀಯ ಮೇಲಾಟ, ಜಾತಿ ಲಾಬಿ ಜೋರಾಗಿದೆ.ರಾಜ್ಯದ ಎ ಗ್ರೇಡ್ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ರಚನೆ ಜವಾಬ್ದಾರಿ ರಾಜ್ಯ ಧಾರ್ಮಿಕ ಪರಿಷತ್ ಆಗಿದ್ದರೆ, ಬಿ ಮತ್ತು ಸಿ ಗ್ರೇಡ್ ದೇವಾಲಯಗಳ ಅಂತಿಮ ಪಟ್ಟಿ ಜಿಲ್ಲಾಮಟ್ಟದಲ್ಲೇ ಆಯ್ಕೆಯಾಗುತ್ತದೆ. ರಾಜ್ಯದಲ್ಲಿ ಒಟ್ಟು 205 ಎ ಗ್ರೇಡ್ ದೇವಾಲಯಗಳಿದ್ದು, ಬೆಂಗಳೂರು ನಗರದ 4. ಬಳ್ಳಾರಿ 4,ಬೆಳಗಾವಿ 3, ಚಿಕ್ಕಗಳೂರು 3, ದಕ್ಷಿಣ ಕನ್ನಡ 25, ಹಾಸನ 5, ಮಂಡ್ಯ 6, ಮೈಸೂರು 5, ರಾಮನಗರ 3, ಶಿವಮೊಗ್ಗ 5. ತುಮಕೂರು 10, ಉಡುಪಿ 20,
ಉತ್ತರ ಕನ್ನಡ 5 ದೇಗುಲ ಸೇರಿದಂತೆ 100 ಅಧಿಕ ದೇವಾಲಗಳ ವ್ಯವಸ್ಥಾಪನಾ ಸಮಿತಿ ರಚನೆ ಬಾಕಿಯಿದೆ. ಜುಲೈನಲ್ಲಿ ನಡೆದ ಪರಿಷತ್ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ 7, ರಾಯಚೂರು 1, ಮೈಸೂರು 9, ಉಡುಪಿ 4, ಮಂಡ್ಯ 14, ಚಿಕ್ಕಬಳ್ಳಾಪುರ 1, ಬೆಳಗಾವಿ 1 ದೇಗು ಲಗಳ ಸಮಿತಿಗೆ ಒಪ್ಪಿಗೆ ಸೂಚಿಸಲಾಗಿದೆ.
ಜಾತಿ, ಪಕ್ಷಗಳ ಲಾಬಿ: ಅವಧಿ ಮುಗಿದ ಎ, ಬಿ, ಸಿ ದರ್ಜೆ ದೇವಳ ವ್ಯವಸ್ಥಾಪನಾ ಸಮಿತಿ ರಚನೆಗೆ ಅರ್ಜಿ ಸಲ್ಲಿಕೆ ದಿನಾಂಕ ಮುಗಿದಿವೆ. ಪ್ರತಿಯೊಂದು
ದೇವಾಲಯಗಳಲ್ಲೂ 9 ಸ್ಥಾನಗಳಿಗೆ (ಪರಿಶಿಷ್ಟ ಜಾತಿ, ಮಹಿಳೆ, ಸಾಮಾನ್ಯ, ಆರ್ಚಕ) ನೇಮಕ ನಡೆಯಲಿದೆ. ರಾಜ್ಯ ಧಾರ್ಮಿಕ ಪರಿಷತ್ ಮತ್ತು ಜಿಲ್ಲಾ ಧಾರ್ಮಿಕ ಪರಿಷತ್ ಸಭೆಯಲ್ಲಿ ಈ ಆಯ್ಕೆ ನಡೆಯುತ್ತಿರುವ ಕಾರಣ ವ್ಯವಸ್ಥಾಪನಾ ಸಮಿತಿಗೆ ಆಯ್ಕೆಯಾಗ ಬಯಸುವವರ ಲಾಬಿ ಜೋರಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಆದಾಯ ಕಡಿಮೆಯಿರುವ ದೇವಾಲಯಗಳಲ್ಲೂ ಅಧಿಕಾರಕ್ಕಾಗಿ ಲಾಬಿ ಜೋರಾಗಿದೆ.

 

 

 

 

 

 

 

 

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments