ದರ್ಶನ್ ಬಂಧಿಸಿದ್ದ ಎಸಿಪಿ ಚಂದನ್ಗೆ ಕೇಸರಿ ಬ್ರಿಗೇಡ್ ಠಕ್ಕರ್ ಕೊಟ್ಟಿದೆ. ಕೇಸರಿ ಕಾರ್ಯಕರ್ತ ಪುನೀತ್ ಕೆರೆಹಳ್ಳಿಗೆ ಬಟ್ಟೆ ಬಿಚ್ಚಿ ಥಳಿಸಿದ್ದಾರೆ ಎಂಬ ಆರೋಪ ಎಸಿಪಿ ಚಂದನ್ ಮೇಲಿದೆ. ದರ್ಶನ್ ಬಂಧಿಸಿ ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದ್ದ ಎಸಿಪಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಾಜಿ ಸಂಸದ, ಕೇಸರಿ ಬೆಂಕಿ ಚೆಂಡು ಪ್ರತಾಪ್ ಸಿಂಹ, ಕರಾವಳಿ ಸಿಡಿಗುಂಡು ಹರೀಶ್ ಪೂಂಜಾ ಸೇರಿ ಹಲವು ಘಟಾನುಘಟಿಗಳೇ ಬಿಜೆಪಿ ಕಾರ್ಯಕರ್ತರ ಸಮೇತ ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ ಎಸಿಪಿ ಕಚೇರಿಗೆ ನುಗ್ಗಿದ್ದಾರೆ. ಎಸಿಪಿ ಬರಲಿ ಎಂದು ಎಂದು ಕಾಯುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅಲ್ಲ, ನಮ್ಮ ಪ್ರಶ್ನೆಗೆ ಉತ್ತರಿಸಿ ಮೈಲೇಜ್ ತೆಗೆದುಕೊಳ್ಳಲಿ ಎನ್ನುತ್ತಿದ್ದಾರೆ. ನಮ್ಮ ಕಾರ್ಯಕರ್ತನನ್ನು ಬಟ್ಟೆ ಬಿಚ್ಚಿ ಥಳಿಸಿ ಅವಮಾನಗೊಳಿಸಿ ಕಾನೂನಿಗೆ ವಿರುದ್ಧವಾಗಿ ವರ್ತಿಸಿದ್ದಾರೆಂದು ಎಸಿಪಿ ಚಂದನ್ ವಿರುದ್ಧ ಸಿಡಿದೆದ್ದಿದ್ದಾರೆ. ರಾಜಕೀಯ ನಾಯಕರುಗಳ ಪ್ರತಿಭಟನೆಗೆ ಎಸಿಪಿ ಚಂದನ್ ಕುಮಾರ್ ದಂಗಾಗಿದ್ದಾರೆ. ಕಚೇರಿ ಮುಂದೆ ಪ್ರತಿಭಟನೆ ನಡೀತಿದ್ರೆ, ಎಸಿಪಿ ಚಂದನ್ ಇನ್ನೂ ಕೂಡ ಠಾಣೆಗೆ ಬಂದಿಲ್ಲ.