Freedom TV

ತೆಲಂಗಾಣ ವಿಧಾನಸಭೆ ಚುನಾವಣೆ 2023: ಮತದಾನ ಆರಂಭ

ಹೈದರಾಬಾದ್​ : ತೆಲಂಗಾಣದ ಎಲ್ಲಾ 119 ವಿಧಾನಸಭಾ ಕ್ಷೇತ್ರಗಳಲ್ಲಿ ಗುರುವಾರ ಬೆಳಗ್ಗೆ 7ರಿಂದ ಮತದಾನ ಆರಂಭಗೊಂಡಿದ್ದು. ಸಂಜೆ 6ರವರೆಗೆ ನಡೆಯಲಿದೆ. ಆಡಳಿತಾರೂಢ ಬಿಆರ್​ಎಸ್​​, ಕಾಂಗ್ರೆಸ್​ ಮತ್ತು ಬಿಜೆಪಿ ಕಣದಲ್ಲಿರುವ ಪ್ರಮುಖ ಪಕ್ಷಗಳು ಹೈದರಾಬಾದ್​​​ನ ಕೆಲವೆಡೆ ಎಐಎಂಐಎಂ ಕೂಡ ಸ್ಪರ್ಧಿಸಿದೆ.

119 ಕ್ಷೇತ್ರಗಳಿರುವ ತೆಲಂಗಾಣ ವಿಧಾನಸಭೆಗೆ 3.17 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ಸೇರಿದಂತೆ 109 ಪಕ್ಷಗಳಿಂದ ಒಟ್ಟು 2,290 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ರಾಜ್ಯದಾದ್ಯಂತ 35,655 ಮತಗಟ್ಟೆಗಳನ್ನು ನಿರ್ಮಿಸಲಾಗಿದೆ. 2.8 ಲಕ್ಷ ಸಿಬ್ಬಂದಿ ಚುನಾವಣಾ ಕರ್ತವ್ಯ ನಿರ್ವಹಿಸಲಿದ್ದಾರೆ. 12 ಸಾವಿರ ಮತಗಟ್ಟೆಗಳು ಸೂಕ್ಷ್ನ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಬಿಗಿ ಬಂದೋಬಸ್ತ್​​ ವ್ಯವಸ್ಥೆ ಮಾಡಲಾಗಿದೆ. ಸ್ಪರ್ಧಿಗಳಲ್ಲಿ 22 ಮಹಿಳೆಯರು ಹಾಗೂ ಓರ್ವ ತೃತಿಯ ಲಿಂಗಿ ಸೇರಿದ್ದಾರೆ. ಒಟ್ಟು 103 ಮಂದಿ ಶಾಸಕರು ಈ ಬಾರಿ ಮರು ಸ್ಪರ್ಧಿಸುತ್ತಿದ್ದು, ಬಹುತೇಕರು ಆಡಳಿತಾರೂಢ ಬಿಆರ್​​​ಎಸ್​​ನಿಂದ ಕಣಕ್ಕಿಳಿದಿದ್ದಾರೆ.

Comments (0)

Your email address will not be published. Required fields are marked *

Back to top button